ಇಸ್ಲಾಮಾಬಾದ್ : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಸ್ವೀಕರಿಸದೇ ಇರುವುದು ಅಸಾಂವಿಧಾನಿಕ.
ಹೀಗಾಗಿ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವಂತೆ ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿದೆ.
ವಿಸರ್ಜನೆಗೊಂಡಿರುವ ಪಾಕಿಸ್ತಾನದ ಸಂಸತ್ತು ನ್ಯಾಷನಲ್ ಅಸೆಂಬ್ಲಿಯನ್ನು ಮರುಸ್ಥಾಪನೆ ಮಾಡಿರುವ ಸುಪ್ರೀಂ ಕೋರ್ಟ್, ಏ.9 ರಂದು ಸಂಸತ್ನ ಅಧಿವೇಶನ ಕರೆಯುವಂತೆ ಸ್ಪೀಕರ್ಗೆ ಸೂಚಿಸಿದೆ.
ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಗೊಳಿಸುವ ಪ್ರಯತ್ನವನ್ನು ವಿಫಲಗೊಳಿಸಿದ್ದ ಇಮ್ರಾನ್ ಖಾನ್, ಕಳೆದ ಭಾನುವಾರ ಪಾಕಿಸ್ತಾನದ ಸಂಸತ್ತನ್ನು ವಿಸರ್ಜನೆ ಮಾಡಲು ಅಧ್ಯಕ್ಷ ಆರಿಫ್ ಅಲ್ವಿ ಅವರಿಂದ ಅನುಮೋದನೆ ಪಡೆದುಕೊಂಡಿದ್ದರು.
ಮೈತ್ರಿಕೂಟದ ಕೆಲ ಪಕ್ಷಗಳು ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆದರೆ ಇದಕ್ಕೆ ಉಪ ಸಭಾಪತಿ ಖಾಸಿಮ್ ಸೂರಿ ಸೊಪ್ಪು ಹಾಕಿರಲಿಲ್ಲ. ಇದರಿಂದ ಸಂಸತ್ತು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಇಮ್ರಾನ್ ಖಾನ್ ಸಲಹೆ ನೀಡಿದ್ದರು.