ಒಂದೇ ವಾಟ್ಸಪ್ ಖಾತೆಯನ್ನು 4 ಫೋನ್ಗಳಲ್ಲೂ ಬಳಸಬಹುದು

ಗುರುವಾರ, 27 ಏಪ್ರಿಲ್ 2023 (11:51 IST)
ವಾಷಿಂಗ್ಟನ್ : 200 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಇದೀಗ ಹೊಸ ಫೀಚರ್ ಅನ್ನು ಹೊರತಂದಿದೆ. ಒಂದೇ ವಾಟ್ಸಪ್ ಖಾತೆಯನ್ನು ಇದೀಗ ಒಂದಕ್ಕಿಂತಲೂ ಅಧಿಕ ಫೋನ್ಗಳಲ್ಲಿ ಲಾಗ್ಇನ್ ಮಾಡಲು ಅನುಮತಿ ನೀಡಿದೆ.
 
ಈ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳಲ್ಲಿ ಮಾಹಿತಿ ನೀಡಿದ್ದಾರೆ. ಇಂದಿನಿಂದ ನೀವು 4 ಫೋನ್ಗಳಲ್ಲಿ ವಾಟ್ಸಪ್ನ ಒಂದೇ ಖಾತೆಯನ್ನು ಲಾಗ್ಇನ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ವಾಟ್ಸಪ್ನ ಒಂದು ಖಾತೆಯನ್ನು ನಾವು ಒಂದು ಫೋನ್ ಹಾಗೂ ಒಂದು ಡೆಸ್ಕ್ಟಾಪ್ ಸಾಧನಗಳಲ್ಲಷ್ಟೇ ಬಳಸಲು ಸಾಧ್ಯವಾಗುತ್ತಿತ್ತು. ಈ ಮಿತಿ ಇದೀಗ ವಿಸ್ತರಣೆಯಾಗಿದ್ದು, ಒಂದೇ ಖಾತೆಯನ್ನು 4 ಫೋನ್ಗಳಲ್ಲಿ ಬಳಸಲು ಸಾಧ್ಯವಾಗುತ್ತಿದೆ. ಈ ಫೀಚರ್ ಮುಂದಿನ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ ಎಂದು ವಾಟ್ಸಪ್ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ