ಯೋಧರಿಗೆ ಆಹಾರ ನೀಡಲು ಒದ್ದಾಡುತ್ತಿದೆ ಪಾಕ್!

ಗುರುವಾರ, 23 ಫೆಬ್ರವರಿ 2023 (10:09 IST)
ಇಸ್ಲಾಮಾಬಾದ್ : ನೆರೆಯ ಪಾಕಿಸ್ತಾನದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಇದೀಗ ಅಲ್ಲಿನ ಸೇನೆಗೂ ತಟ್ಟಿದೆ. ಪಾಕ್ ಸೈನಿಕರಿಗೆ ಇದೀಗ ಸರಿಯಾಗಿ ಊಟವನ್ನೂ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ರಾವಲ್ಪಿಂಡಿಯಲ್ಲಿರುವ ಹಿರಿಯ ಸೇನಾಧಿಕಾರಿಗಳಿಗೆ ಆಹಾರದ ಸಮಸ್ಯೆಯಾಗುತ್ತಿರುವ ಬಗ್ಗೆ ಪತ್ರಗಳು ಬಂದಿವೆ. ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ ಹಾಗೂ ವಿಶೇಷ ಅನುದಾನಗಳ ಕಡಿತದಿಂದಾಗಿ ಸೈನಿಕರಿಗೆ ಸಾರಿಯಾಗಿ 2 ಹೊತ್ತು ಊಟ ನೀಡಲು ಸಾಧ್ಯವಾಗುತ್ತಿಲ್ಲ.

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗಡಿಯಲ್ಲಿ ತೆಹ್ರಿಕ್-ಎ-ತಾಲಿಬಾನ್ (ಟಿಟಿಪಿ) ದಾಳಿ ನಡೆಸುತ್ತಿದ್ದು, ಈ ಹಿನ್ನೆಲೆ ಪಾಕಿಸ್ತಾನದ ಪಡೆಗಳು ದೇಶಾದ್ಯಂತ ವಿವಿಧ ಕಾರ್ಯಾಚರಣೆಗಳಲ್ಲಿ ತೊಡಗಿವೆ. ಇದೀಗ ಆರ್ಥಿಕ ಕುಸಿತದಿಂದಾಗಿ ಸೈನಿಕರಿಗೆ ಸರಿಯಾಗಿ ಊಟವೂ ಸಿಗುತ್ತಿಲ್ಲ. ಸೈನಿಕರಿಗೆ ಹೆಚ್ಚಿನ ಆಹಾರ ಹಾಗೂ ವಿಶೇಷ ನಿಧಿಯ ಅಗತ್ಯವಿದೆ ಎಂದು ಡಿಜಿ ಮಿಲಿಟರಿ ಕಾರ್ಯಾಚರಣೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ