ಇಂದಿರಾ ಕ್ಯಾಂಟೀನ್ನಲ್ಲಿ ನೀರಿನ ಸಮಸ್ಯೆ ಆಯ್ತು ಈಗ ಆಹಾರ ಸಮಸ್ಯೆ ಎದುರಾಗಿದೆ.ಇಡ್ಲಿ, ಸಾಂಬಾರ್, ಪಲಾವ್, ಮೊಸರನ್ನ, ಚಟ್ನಿ, ಪಾಯಸ ಪೂರೈಕೆ ಸ್ಥಗಿತವಾಗಲಿದೆ.ಕ್ಯಾಂಟೀನ್ ಯೋಜನೆ ನಿರ್ವಹಣೆಯಲ್ಲಿ ಬಿಬಿಎಂಪಿ ಹಿಂದೇಟು ಹಾಕಿದೆ.ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಕಾರಣ ಕೆಲ ಆಹಾರ ಪೂರೈಕೆ ಸ್ಥಗಿತವಾಗಲಿದೆ.
ಮೊದಲು ಬೆಳಗ್ಗೆ ತಿಂಡಿಗೆ ಇಡ್ಲಿ, ಸಾಂಬಾರ್ ಪೂರೈಕೆ ಆಗುತ್ತಿತ್ತು.ಮಧ್ಯಾಹ್ನ ಅನ್ನ ಸಾಂಬಾರ್, ಮೊಸರನ್ನ, ಪಲಾವ್ ಕೊಡಲಾಗುತ್ತಿತ್ತು.ಇಡ್ಲಿ, ಸಾಂಬಾರ್, ಚಟ್ನಿ ಜೊತೆಗೆ ಮಧ್ಯಾಹ್ನ ಮೊಸರನ್ನ, ಪಲಾವ್ ಮತ್ತು ಪಾಯಸವೂ ಸ್ಥಗಿತವಾಗಲಿದೆ.ಆದರೆ ಈಗ ಕ್ಯಾಂಟೀನ್ ನಲ್ಲಿ 4-5 ಆಹಾರಗಳು ಸ್ಥಗಿತವಾಗಿದೆ.ಬೆಳಗ್ಗೆ ರೈಸ್ ಬಾತ್, ಮಧ್ಯಾಹ್ನ ಅನ್ನ ಸಾಂಬಾರ್ ಮಾತ್ರ ಪೂರೈಕೆ ಆಗಲಿದೆ.ವಿಧ ವಿಧವಾದ ಆಹಾರ ಪೂರೈಕೆ ಸ್ಥಗಿತದ ಬಗ್ಗೆ ಗ್ರಾಹಕರಿಂದ ಬೇಸರ ವ್ಯಕ್ತವಾಗಿದೆ.ಸರಿಯಾದ ನಿರ್ವಹಣೆ ಇಲ್ಲದೇ ಮುಚ್ಚಿ ಹೋಗುವ ಸಾಧ್ಯತೆ ಎದುರಾಗಿದೆ.ಸರ್ಕಾರ ಮತ್ತು ಬಿಬಿಎಂಪಿ ಬಿಲ್ಗಳನ್ನು ಪಾವತಿ ಮಾಡಿ ಆಹಾರ ಪೂರೈಕೆ ಮಾಡುತ್ತಾ ಇಲ್ವಾ ಎಂಬ ಪ್ರಶ್ನೆ ನಿರ್ಮಾಣವಾಗಿದೆ.