ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು
ಕಾಶ್ಮೀರದ ಕಣಿವೆಯಲ್ಲಿ ಭಾರತ ಸರ್ಕಾರದ ಪ್ರತಿಷ್ಠೆಯನ್ನು ಹಾಳುಮಾಡುವ ರೀತಿಯಲ್ಲಿ ಸಂಚು ರೂಪಿಸಲು ಪಾಕಿಸ್ತಾನವು ಪ್ರಪಂಚದಾದ್ಯಂತದ ತನ್ನ ರಾಯಭಾರ ಕಚೇರಿಗಳನ್ನು ಕೇಳಿದ್ದು, ಸಂಚು ರೂಪಿಸುವ ರಹಸ್ಯ ಟಿಪ್ಪಣಿಯನ್ನು ರಾಯಭಾರ ಕಚೇರಿಗಳಿಗೆ ಕಳುಹಿಸಿದೆ ಎನ್ನಲಾಗಿದೆ.
`ಕಾಶ್ಮೀರ ಒಗ್ಗಟ್ಟಿನ ದಿನದಂದು (ಫೆಬ್ರವರಿ 5 ರಂದು ಪಾಕಿಸ್ತಾನವು ಆಚರಿಸುವ ದಿನ), ಇಸ್ಲಾಮಾಬಾದ್ನಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ತನ್ನ ಎಲ್ಲಾ ರಾಯಭಾರ ಕಚೇರಿಗಳಿಗೆ ಫ್ಯಾಕ್ಸ್ ಮತ್ತು ಇಮೇಲ್ಗಳನ್ನು ಕಳುಹಿಸಿದೆ. ಅದರಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ನಾಶ ಮಾಡುವ ಯೋಜನೆಗಳ ಬಗ್ಗೆ ವಿವರಿಸಿದೆ ಎಂದು ಗುಪ್ತಚರ ಏಜೆನ್ಸಿ ವಿವರಿಸಿದೆ.