ಪಾಕ್ ಜತೆ ಆಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಕೋಚ್ ರವಿಶಾಸ್ತ್ರಿ, ಕೊಹ್ಲಿ ಹೇಳಿದ್ದೇನು ಗೊತ್ತಾ?

ಭಾನುವಾರ, 24 ಫೆಬ್ರವರಿ 2019 (08:52 IST)
ಮುಂಬೈ: ವಿಶ್ವಕಪ್ ನಲ್ಲಿ ಪಾಕಿಸ್ತಾನ ಜತೆ ಪಂದ್ಯವಾಡಬೇಕೇ ಬೇಡವೇ ಎಂಬ ಚರ್ಚೆಗಳ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಪಾಕ್ ಜತೆ ಆಡುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಕೋಚ್ ರವಿಶಾಸ್ತ್ರಿ ನಾವು ಭಾರತ ಸರ್ಕಾರ ಮತ್ತು ಬಿಸಿಸಿಐ ಆದೇಶವನ್ನು ಪಾಲಿಸುತ್ತೇವೆ ಎಂದಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶ ಏನನ್ನು ಬಯಸುತ್ತದೋ ಅದನ್ನೇ ಮಾಡುತ್ತೇವೆ ಎಂದಿದ್ದಾರೆ.

‘ಈ ನಿರ್ಧಾರ ಸಂಪೂರ್ಣವಾಗಿ ಸರ್ಕಾರ ಮತ್ತು ಬಿಸಿಸಿಐಗೆ ಬಿಟ್ಟಿದ್ದು. ಅವರು ಎಲ್ಲಾ ವಿದ್ಯಮಾನಗಳನ್ನು ಗಮನಿಸಿ ತೀರ್ಮಾನಕ್ಕೆ ಬರುತ್ತಾರೆ. ಅವರು ಏನು ಹೇಳುತ್ತಾರೋ ಅದನ್ನೇ ಮಾಡುತ್ತೇವೆ. ಒಂದು ವೇಳೆ ಈಗ ಆಡುವುದು ಸರಿಯಲ್ಲ ಎಂದು ಸರ್ಕಾರ ಹೇಳಿದರೆ ನಾವು ಸರ್ಕಾರದ ತೀರ್ಮಾನಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇವೆ’ ಎಂದು ಶಾಸ್ತ್ರಿ ಹೇಳಿದ್ದಾರೆ.

ಈಗಾಗಲೇ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಸೌರವ್ ಗಂಗೂಲಿ ಆಡಬಾರದು ಎಂದು ವಾದಿಸಿದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆಡಿ ಸೋಲಿಸಬೇಕು ಎಂದಿದ್ದಾರೆ. ಬಿಸಿಸಿಐ ಕೇಂದ್ರದ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ