ಇಸ್ಲಾಮಾಬಾದ್ : ಭಾರತ ವಿರೋಧಿ ಮತ್ತು ಸುಳ್ಳು ಸುದ್ದಿ ಹರಡುತ್ತಿರುವ ಕಾರಣ 20 ಯೂಟ್ಯೂಬ್ ಚಾನೆಲ್ಗಳು ಮತ್ತು ಎರಡು ವೆಬ್ಸೈಟ್ಗಳನ್ನು ನಿರ್ಬಂಧಿಸಲಾಗಿದೆ.
ಭಾರತೀಯ ಸೇನೆ, ಆಯೋಧ್ಯೆ ರಾಮ ಮಂದಿರ, ಕಾಶ್ಮೀರ, ಭಾರತದಲ್ಲಿ ಅಲ್ಪಸಂಖ್ಯಾತರು ಜ.ಬಿಪಿನ್ ರಾವತ್ ವಿಷಯದಲ್ಲಿ ಸತತವಾಗಿ ಸುಳ್ಳು ಸುದ್ದಿ ಮತ್ತು ಭಾರತ ವಿರೋಧಿ ಸುದ್ದಿ ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನ ಮೂಲದ 20 ಯೂಟ್ಯೂಬ್ ಚಾನೆಲ್, 2 ವೆಬ್ಸೈಟ್ಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ.
ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ದನಯಾಪಾಕಿಸ್ತಾನ್ ಗ್ರೂಪ್ ಈ ಯೂಟ್ಯೂಬ್ ಚಾನೆಲ್ ಮತ್ತು ವೆಬ್ಸೈಟ್ಗಳನ್ನು ನಿರ್ವಹಿಸುತ್ತಿದೆ. ಈ ಚಾನೆಲ್ಗಳಲ್ಲಿ ಪ್ರಸಾರವಾಗುವ ಸುದ್ದಿ, ನಿಜ ಎಂದು ಜನರನ್ನು ನಂಬಿಸಲು ಪಾಕ್ ಸುದ್ದಿವಾಹಿಸಿಗಳ ಪ್ರಮುಖ ಆ್ಯಂಕರ್ಗಳನ್ನೇ ಬಳಸಿಕೊಂಡು ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿತ್ತು. ಹೀಗಾಗಿ ಸಾಕಷ್ಟು ಜನಯವಾಗಿದ್ದ ಈ ಚಾನೆಲ್ಗಳು 35 ಲಕ್ಷಕ್ಕೂ ಸಬ್ಸ್ಕೈಬ್ರರ್ಗಳನ್ನು ಹೊಂದಿದ್ದ 55 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿವೆ.
ಭಾರತಕ್ಕೆ ಸಂಬಂಧಿಸಿದ ವಿವಿಧ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡುತ್ತಿವೆ. ವೆಬ್ಸೈಟ್ಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಮಾಹಿತಿ ಜಾಲಕ್ಕೆ ಸೇರಿವೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುಪ್ತಚರ ಸಂಸ್ಥೆ ತಿಳಿಸಿವೆ.