ಎರಡು ದಿನ ಐಸಿಯುವಿನಲ್ಲಿದ್ದರೂ ಸೆಮಿಫೈನಲ್ ಆಡಿದ್ದ ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್!
ಈ ಫೋಟೋಗಳನ್ನು ಪಾಕ್ ಮಾಜಿ ಕ್ರಿಕೆಟಿಗ ಶೊಯೇಬ್ ಅಖ್ತರ್ ಹಂಚಿಕೊಂಡಿದ್ದಾರೆ. ರಿಜ್ವಾನ್ ಎದೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಎರಡು ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಇಂತಹ ಪರಿಸ್ಥಿತಿಯಲ್ಲೂ ಸೆಮಿಫೈನಲ್ ನಲ್ಲಿ ಆಡಿ 67 ರನ್ ಗಳಿಸಿದ್ದರು!
ರಿಜ್ವಾನ್ ಹೋರಾಟದ ಮನೋಭಾವಕ್ಕೆ ಭಾರತದ ಮಾಜಿ ಕ್ರಿಕೆಟಿಗರೂ ಸೇರಿದಂತೆ ಕ್ರಿಕೆಟ್ ಲೋಕದಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಾವಾಗಿಯೇ ಆಡಬೇಕೆಂದು ರಿಜ್ವಾನ್ ಬಯಕೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಅವರು ಸಿದ್ಧರಾಗಿದ್ದರು ಎಂದು ತಿಳಿದುಬಂದಿದೆ.