107 ಮಂದಿ ಇದ್ದ ಪಾಕಿಸ್ತಾನದ ಏರ್ ಲೈನ್ಸ್ ವಿಮಾನ ಪತನ

ಶನಿವಾರ, 23 ಮೇ 2020 (08:42 IST)
ಪಾಕಿಸ್ತಾನ : ಪಾಕಿಸ್ತಾನದ ಏರ್ ಲೈನ್ಸ್ ನ ವಿಮಾನವೊಂದು ಲಾಹೋರ್ ನ  ಕರಾಚಿಯ ಬಳಿ ಪತನಕ್ಕೀಡಾಗಿದೆ.


ಪಿಕೆ 8303 ನಂಬರ್ ನ ಈ ವಿಮಾನದಲ್ಲಿ  99 ಪ್ರಯಾಣಿಕರು ಹಾಗೂ 8 ಸಿಬ್ಬಂದಿಗಳು ಸೇರಿ ಒಟ್ಟು 107 ಜನ ಇದ್ದರು ಎಂದು ಪಾಕಿಸ್ತಾನದ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಕ್ತಾರರು ತಿಳಿಸಿದ್ದಾರೆ.  


ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದ್ದು, ನೂರಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನ ರಕ್ಷಣಾ ಪಡೆಯು ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ಶುರು ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ