ಪಾಕಿಸ್ತಾನ ಹಣಕಾಸು ಸಚಿವ ಎಚ್ಚರಿಕೆ?

ಶನಿವಾರ, 6 ಆಗಸ್ಟ್ 2022 (11:44 IST)
ಇಸ್ಲಾಮಾಬಾದ್ : ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಕಷ್ಟದ ದಿನಗಳು ಶೀಘ್ರವೇ ತಲೆದೋರಲಿದೆ.

ಹೀಗಾಗಿ ಮುಂದಿನ 3 ತಿಂಗಳು ಆಮದುಗಳನ್ನು ನಿರ್ಬಂಧಿಸುವುದನ್ನು ಮುಂದುವರಿಸುವುದೇ ಉತ್ತಮ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಹೇಳಿದ್ದಾರೆ.

ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ಮಾಯಿಲ್, ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ನ ಆಡಳಿತದ ಆರ್ಥಿಕ ನೀತಿಗಳಿಂದ ಈಗಿನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಸಂಕಷ್ಟದಲ್ಲಿದೆ ಎಂದು ತಿಳಿಸಿದರು. 

ಹಿಂದಿನ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಸರ್ಕಾರದ ಅವಧಿಯಲ್ಲಿ ದೇಶದ ಬಜೆಟ್ ಕೊರತೆ 1,600 ಶತಕೋಟಿ ಡಾಲರ್ನಷ್ಟು(12 ಸಾವಿರ ಕೋಟಿ ರೂ.) ಆಗಿತ್ತು. ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಆಡಳಿತದಲ್ಲಿ ಆ ಅಂಕಿ 3,500 ಶತಕೋಟಿ ಡಾಲರ್ಗೆ(27 ಸಾವಿರ ಕೋಟಿ ರೂ.) ಏರಿತು. ಈ ರೀತಿಯ ಕೊರತೆಗಳಿಂದ ಯಾವುದೇ ದೇಶ ಬೆಳೆಯಲು ಹಾಗೂ ಸ್ಥಿರವಾಗಿರಲು ಸಾಧ್ಯವಿಲ್ಲ ಎಂದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ