ಇಸ್ಲಾಮಾಬಾದ್ : ಸುದೀರ್ಘ ನ್ಯಾಯಾಲಯದ ಹೋರಾಟದಲ್ಲಿ ಅಕ್ರಮವಾಗಿ ದೇವಾಲಯ ವಶ ಪಡಿಸಿಕೊಂಡಿದ್ದವರನ್ನು ಹೊರಹಾಕಲಾಗಿದೆ.
ಪರಿಣಾಮ ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ 1,200 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಪುನಃಸ್ಥಾಪಿಸಲಾಗುವುದು ಎಂದು ದೇಶದ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲ್ವಿಚಾರಣೆಯ ಫೆಡರಲ್ ಸಂಸ್ಥೆ ತಿಳಿಸಿದೆ.
ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್(ಇಟಿಪಿಬಿ) ಕಳೆದ ತಿಂಗಳು ಪ್ರಸಿದ್ಧ ಅನಾರ್ಕಲಿ ಬಜಾರ್ ಲಾಹೋರ್ ಬಳಿ ಇರುವ ವಾಲ್ಮೀಕಿ ಮಂದಿರವನ್ನು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆದಿದೆ. ಕೃಷ್ಣ ದೇವಾಲಯದ ಜೊತೆಗೆ, ವಾಲ್ಮೀಕಿ ದೇವಾಲಯವು ಲಾಹೋರ್ನಲ್ಲಿರುವ ಏಕೈಕ ಕ್ರಿಯಾತ್ಮಕ ದೇವಾಲಯವಾಗಿದೆ.
ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಳ್ಳುವ ಕ್ರೈಸ್ತ ಕುಟುಂಬ ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜಾತಿಯ ಹಿಂದೂಗಳಿಗೆ ಮಾತ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡುತ್ತಿತ್ತು ಎಂಬುದು ತಿಳಿದುಬಂದಿದೆ. ಅದನ್ನು ಸಾರ್ವಜನಿಕವಾಗಿಸಲು ಇಟಿಪಿಬಿ ವಶಕ್ಕೆ ಪಡೆದುಕೊಂಡಿದೆ.