ಭಾರತದ ಜೊತೆಗೆ ಮತ್ತೆ ವಾಣಿಜ್ಯ ಸಂಬಂಧಕ್ಕೆ ನಾವು ರೆಡಿ ಎಂದ ಪಾಕಿಸ್ತಾನ

Krishnaveni K

ಸೋಮವಾರ, 25 ಮಾರ್ಚ್ 2024 (14:00 IST)
Photo Courtesy: Twitter
ಇಸ್ಲಾಮಾಬಾದ್: ಭಾರತದ ಜೊತೆ ವಾಣಿಜ್ಯ ಸಂಬಂಧ ಮತ್ತೆ ಪುನರಾರಂಭಿಸಲು ನಾವು ರೆಡಿ ಎಂದು ಪಾಕಿಸ್ತಾನದ ನೂತನ ಸರ್ಕಾರ ಹೇಳಿಕೊಂಡಿದೆ. ಈ ವಿಚಾರವನ್ನು ವಿದೇಶಾಂಗ  ಸಚಿವ ಇಶಾಖ್ ದಾರ್ ಹೇಳಿದ್ದಾರೆ.

2019 ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತ ಸರ್ಕಾರದ ವಿರುದ್ಧ ಪ್ರತೀಕಾರವಾಗಿ ಪಾಕಿಸ್ತಾನ ಭಾರತದಲ್ಲಿನ ರಾಯಭಾರಿಯನ್ನು ವಾಪಸ್ ಕರೆಸಿತ್ತು. ಅಲ್ಲದೆ, ಭಾರತದ ಜೊತೆಗಿನ ಎಲ್ಲಾ ವಾಣಿಜ್ಯ ಸಂಬಂಧವನ್ನು ಕಡಿದುಕೊಂಡಿತ್ತು.

ಆದರೆ ಈಗ ಪಾಕಿಸ್ತಾನದಲ್ಲಿ ನೂತನ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಇತ್ತೀಚೆಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಶಹಬಾಜ್ ಶರೀಫ್ ಗೆ ಪ್ರಧಾನಿ ಮೋದಿ ಎಕ್ಸ್ ಪೇಜ್ ನಲ್ಲಿ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಪಾಕ್ ಪ್ರಧಾನಿಯೂ ಧನ್ಯವಾದ ಸಲ್ಲಿಸಿದ್ದರು. ಹೀಗಾಗಿ ಭಾರತದ ಜೊತೆ ಮತ್ತೆ ಸಂಬಂಧ ಬೆಳೆಸುವ ಕನಸಿನಲ್ಲಿ ಪಾಕಿಸ್ತಾನವಿದೆ.

ಆದರೆ ಯಾವುದೇ ವಾಣಿಜ್ಯ ಸಂಬಂಧ ಪುನರಾರಂಭಕ್ಕೆ ಮೊದಲು ಭಾರತದಲ್ಲಿ ರಾಯಭಾರ ಕಚೇರಿಯನ್ನು ಪುನರಾರಂಭಿಸಿದರೆ ಮಾತ್ರ ಸಾಧ‍್ಯ ಎಂದು ಭಾರತ ಸ್ಪಷ್ಟವಾಗಿ ಸೂಚನೆ ನೀಡಿದೆ. ಭಾರತದ ಜೊತೆಗೆ ವಾಣಿಜ್ಯ ಸಂಬಂಧ ಬೆಳೆಸಲು ಅಲ್ಲಿನ ಉದ್ದಿಮೆದಾರರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವ ದಾರ್ ಹೇಳಿದ್ದಾರೆ. ಆದರೆ ಸದ್ಯಕ್ಕೆ ಭಾರತದ ಜೊತೆಗೆ ಸಂಬಂಧ ಸುಧಾರಿಸದ ಹೊರತು ಇದು ಸಾಧ್ಯವಾಗದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ