India Pakistan: ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನ

Krishnaveni K

ಗುರುವಾರ, 8 ಮೇ 2025 (15:52 IST)
ನವದೆಹಲಿ: ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಲು ಮುಂದಾಗಿದ್ದ ವೇಳೆ ಅತ್ತ ಪಾಕಿಸ್ತಾನವೂ ಭಾರತ 15 ನಗರಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಮುಂದಾಗಿತ್ತು. ಆದರೆ ಭಾರತೀಯ ಸೇನೆ ಪಾಕಿಸ್ತಾನದ ರಕ್ಷಣಾ ಘಟಕವನ್ನೇ ಹೊಡೆದುರಳಿಸಿತು ಎಂದು ಇದೀಗ ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡವಿತ್ತು. ಇತ್ತ ಭಾರತ ಸರ್ಕಾರ ದೇಶದಲ್ಲಿ ಮಾಕ್ ಡ್ರಿಲ್ ಗೆ ತಯಾರಿ ನಡೆಸಿತ್ತು. ಇದರೊಂದಿಗೆ ಪಾಕಿಸ್ತಾನಕ್ಕೆ ಯುದ್ಧದ ಸೂಚನೆ ಸಿಕ್ಕಿತ್ತು.

ಇದರ ಬೆನ್ನಲ್ಲೇ ಪಾಕಿಸ್ತಾನದ ಭಾರತದ 15 ನಗರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿತ್ತು. ಆದರೆ ಆಪರೇಷನ್ ಸಿಂಧೂರ್ ನಡೆಸಿದ ಭಾರತೀಯ ಸೇನೆ ಪಾಕಿಸ್ತಾನದ ರಕ್ಷಣಾ ಘಟಕವನ್ನೇ ಹೊಡೆದುರುಳಿಸಿ ಪಾಕ್ ಸಂಚು ವಿಫಲಗೊಳಿಸಿತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಭಾರತದ ಜಮ್ಮು, ಶ್ರೀನಗರ, ಆವಂತಿಪುರ, ಪಠಾಣ್ ಕೋಟ್,  ಜಲಂಧರ್, ಲುಧಿಯಾನ, ಭುಜ್, ಚಂಢೀಘಡ ಸೇರಿದಂತೆ 15 ಪ್ರಮುಖ ನಗರಗಳನ್ನು ಪಾಕಿಸ್ತಾನ ಟಾರ್ಗೆಟ್ ಮಾಡಿಕೊಂಡಿತ್ತು. ಆದರೆ ಭಾರತದ ರಕ್ಷಣಾ ಘಟಕವನ್ನೇ ಗುರಿಯಾಗಿರಿಸಿ ದಾಳಿ ಮಾಡಿದ ಭಾರತೀಯ ಸೇನೆ ಶತ್ರು ರಾಷ್ಟ್ರದ ಸಂಚು ವಿಫಲಗೊಳಿಸಿದೆ ಎಂದು ತಿಳಿದುಬಂದಿದೆ.


https://kannada.webdunia.com/article/international-news-in-kannada/ajit-doval-completes-old-rivalry-with-operation-sindoor-125050800022_1.html

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ