ಶಾಂತಿ ಸೌಹಾರ್ದ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಸೋಮವಾರ, 23 ಸೆಪ್ಟಂಬರ್ 2019 (06:11 IST)
ಪಾಕಿಸ್ತಾನ : ಸೆ. 21 ರ ವಿಶ್ವ ಶಾಂತಿ ದಿನದ ಅಂಗವಾಗಿ ಶಾಂತಿ ಸೌಹಾರ್ದಕ್ಕೆ ಸಂಬಂಧಪಟ್ಟಂತೆ ವಾರ್ಷಿಕ ಜಾಗತಿಕ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ.





ಇದರಲ್ಲಿ ಪಾಕಿಸ್ತಾನವು 163 ದೇಶಗಳ ಪೈಕಿ 153‌ ನೇ ಸ್ಥಾನದಲ್ಲಿ ಇದೆ, ಈ ಮೂಲಕ ಟಾಪ್ 10 ಹಿಂಸಾತ್ಮಕ ದೇಶಗಳಪಟ್ಟಿಯಲ್ಲಿ ಪಾಕಿಸ್ತಾನ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಕಳೆದ ಬಾರಿಯ ವರದಿಗೆ ಹೋಲಿಸಿದರೆ ಪಾಕಿಸ್ತಾನವು ಎರಡು ಸ್ಥಾನ ಹಿಂಬಡ್ತಿ ಪಡೆದಂತಾಗಿದೆ.


ಶಾಂತಿ ಸೌಹಾರ್ದ ಪಟ್ಟಿಯಲ್ಲಿ ಐಸ್ ಲ್ಯಾಂಡ್  ನಂಬರ್ 1 ಸ್ಥಾನವನ್ನು ಪಡೆಯುವುದರ ಮೂಲಕ ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲದೆ ಪ್ರಕೃತಿ ವಿಕೋಪಗಳ ಪಟ್ಟಿಯಲ್ಲಿ ಭಾರತ ಸೇರಿದಂತೆ ಫಿಲಿಪೈನ್ಸ್, ಜಪಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಇಂಡೊನೇಷ್ಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಟಾಪ್ 10 ಸ್ಥಾನಗಳ ಪಟ್ಟಿಯಲ್ಲಿವೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ