ಟೋಕಿಯೊ ಒಲಿಂಪಿಕ್ಸ್: ರಿಂಗ್ ನಲ್ಲೇ ಫ್ರಾನ್ಸ್ ಬಾಕ್ಸರ್ ಒಂದು ಗಂಟೆ ಪ್ರತಿಭಟನೆ!

ಭಾನುವಾರ, 1 ಆಗಸ್ಟ್ 2021 (17:22 IST)
ಪಂದ್ಯದಿಂದ ಅನರ್ಹಗೊಳಿಸಿದ್ದರಿಂದ ಅಸಮಾಧಾನಗೊಂಡ ಫ್ರಾನ್ಸ್ ಬಾಕ್ಸರ್ ರಿಂಗ್ ಒಳಗೆ ಸುಮಾರು ಒಂದೂವರೆ ಗಂಟೆ ಪ್ರತಿಭಟನೆ ನಡೆಸಿದ್ದೂ ಅಲ್ಲದೇ ಸಿಟ್ಟಿನಲ್ಲಿ ಕ್ಯಾಮರಾಗೆ ಗುದ್ದಿ ಧ್ವಂಸ ಮಾಡಿದ ಘಟನೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ನಡೆದಿದೆ.
ಸೂಪರ್ ಹೇವಿವೇಟ್ ಬಾಕ್ಸಿಂಗ್ ಪಂದ್ಯದ ವೇಳೆ ಮೌರದ್ ಅಲಿವ್ ಸುಮಾರು ಒಂದು ಗಂಟೆ ರಿಂಗ್ ನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಬ್ರಿಟನ್ ನ ಫ್ರೇಜರ್ ಕ್ಲಾರ್ಕ್ ವಿರುದ್ಧದ ಪಂದ್ಯದ ವೇಳೆ ಇಬ್ಬರು ತಲೆಗಳಲ್ಲಿ ಗುದ್ದಿಕೊಂಡಿದ್ದು. ಈ ವೇಳೆ ಮೌರದ್ ಅಲಿವ್ ನಿಯಮ ಮೀರಿದ ರೀತಿ
ಹೊಡೆತ ನೀಡಿದ್ದರಿಂದ ತೀರ್ಪುಗಾರರು ಅನರ್ಹ ಎಂದು ತೀರ್ಪು ನೀಡಿದರು.
ಇದರಿಂದ ರಿಂಗ್ ನಲ್ಲಿಯೇ ತಮ್ಮ ಅಸಮಾಧಾನ ಹೊರಹಾಕಿದ ಮೌರದ್, ಗಾಳಿಯಲ್ಲಿ ಗುದ್ದಿದ್ದೂ ಅಲ್ಲದೇ ಆಕ್ಷಾಪರ್ಹ ಸನ್ನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಟೀವಿ ಕ್ಯಾಮರಾಗೆ ಗುದ್ದಿ ಹಾಳು ಮಾಡಿದ್ದೂ ಅಲ್ಲದೇ ರಿಂಗ್ ತೊರೆಯಲು ನಿರಾಕರಿಸಿ ಸುಮಾರು 20 ನಿಮಿಷ ಕಿರುಚಾಡಿದರು. ನಂತರ ಪ್ರತಿಭಟನೆ ನಡೆಸುವುದಾಗಿ ರಿಂಗ್ ಒಳಗೆ ಸುಮಾರು ಒಂದು ಗಂಟೆ ಕಾಲ ಕುಳಿತುಕೊಂಡಿದ್ದರು.
ತಲೆಯಲ್ಲಿ ಹೊಡೆದಿದ್ದರಿಂದ ಬ್ರಿಟನ್ ಸ್ಪರ್ಧಿಯ ಕಣ್ಣಿನ ಬಳಿ ಗಾಯವಾಗಿದ್ದು, 5 ಬಾರಿ ಊತ ಕಡಿಮೆ ಮಾಡಲು ಕಟ್ ಮಾಡಬೇಕಾಯಿತು. ಆದ್ದರಿಂದ ಫ್ರಾನ್ಸ್ ಸ್ಪರ್ಧಿಯನ್ನು ಅನರ್ಹಗೊಳಿಸಬೇಕಾಯಿತು ಎಂದು ತೀರ್ಪುಗಾರರು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ