ಪಾಕಿಸ್ತಾನದ ಟಿವಿ ಚಾನೆಲ್ ಗಳಿಗೆ ಹೊಸ ರೂಲ್ಸ್ ನ್ನು ವಿಧಿಸಿದ ಪಿಇಎಂಆರ್‌ಎ. ಏನದು ಗೊತ್ತಾ?

ಶುಕ್ರವಾರ, 11 ಜನವರಿ 2019 (07:16 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಟಿವಿ ಚಾನೆಲ್ ಗಳು ಇನ್ನುಮುಂದೆ ವೀಕ್ಷಕರ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ರೊಮ್ಯಾಂಟಿಕ್ ದೃಶ್ಯಗಳನ್ನು ಪ್ರದರ್ಶಿಸಬಾರದು ಎಂಬ ಹೊಸ ನಿಯಮವನ್ನು  ಜಾರಿಗೆ ತರಲಾಗಿದೆ.


ಹೌದು. ಪಾಕಿಸ್ತಾನದ ಕಿರುತೆರೆ ಉದ್ಯಮದಲ್ಲಿ ಬೋಲ್ಡ್ ದೃಶ್ಯಗಳು ಪ್ರಸಾರವಾಗುತ್ತಿದ್ದು ಇವುಗಳ ವಿರುದ್ಧ ಸಾರ್ವಜನಿಕವಾಗಿ ಸಾಕಷ್ಟು ದೂರುಗಳು ಬರುತ್ತಿವೆ .


ಈ ಹಿನ್ನಲೆಯಲ್ಲಿ ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ(ಪಿಇಎಂಆರ್‌ಎ) ಟಿವಿ ಚಾನೆಲ್ ಗಳಿಗೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಮಾಧ್ಯಮ ಮಾರ್ಗದರ್ಶಿ ಸೂತ್ರಗಳನ್ನು ಗೌರವಿಸಬೇಕು. ಪಾಕ್ ಸಂಪ್ರದಾಯಕ್ಕೆ ಧಕ್ಕೆ ತರುವಂತಾ ದೃಶ್ಯಗಳನ್ನು ಬಿತ್ತರಿಸಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ