ಟಾರಿಫ್ ವಾರ್ ನಡುವೆ ಅಮೆರಿಕಾಗೆ ಮೋದಿ ಭೇಟಿ ಕೊಡ್ತಿರೋದು ಯಾಕೆ

Krishnaveni K

ಬುಧವಾರ, 13 ಆಗಸ್ಟ್ 2025 (10:28 IST)
ನ್ಯೂಯಾರ್ಕ್: ರಷ್ಯಾ ಜೊತೆಗೆ ವ್ಯಾಪಾರ, ವ್ಯವಹಾರ ನಿಲ್ಲಿಸಬೇಕು ಎಂದರೂ ಕೇಳದ ಭಾರತದ ಮೇಲೆ ದುಬಾರಿ ಸುಂಕ ವಿಧಿಸಿ ಸೇಡು ತೀರಿಸಿಕೊಳ್ಳುತ್ತಿರುವ ಅಮೆರಿಕಾಗೆ ಪ್ರಧಾನಿ ಮೋದಿ ಭೇಟಿ ಕೊಡುತ್ತಿದ್ದಾರೆ. ಯಾಕೆ? ಇಲ್ಲಿದೆ ವಿವರ.

ಮುಂದಿನ ತಿಂಗಳು ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ಮಾಡಲಿದ್ದಾರೆ. ಟ್ರಂಪ್ ಭಾರತದ ವಿರುದ್ಧ ಕೆಂಡಕಾರುತ್ತಿರುವಾಗಲೇ ಮೋದಿ ಅಮೆರಿಕಾಗೆ ಪ್ರಯಾಣ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಷ್ಟಕ್ಕೂ ಮೋದಿ ಪ್ರವಾಸ ಮಾಡುತ್ತಿರುವುದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು. ಇದು ಮೊದಲೇ ನಿಗದಿಯಾಗಿದ್ದ ಪ್ರವಾಸವಾಗಿದೆ. ಆದರೆ ಈ ವೇಳೆ ಅವರು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ವೃದ್ಧಿಗೆ ಸಭೆ ನಿಯೋಜನೆಯಾಗುವ ಸಾಧ್ಯತೆಗಳಿವೆ. ಈ ವೇಳೆ ಮೋದಿ-ಟ್ರಂಪ್ ಭೇಟಿ ಮಾಡಲಿದ್ದಾರೆ.

ಮೋದಿ ಮಾತ್ರವಲ್ಲದೆ ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲನ್ಸ್ಕಿ ಜೊತೆಗೂ ಮಾತುಕತೆ ನಡೆಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 23 ರಿಂದ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಶೃಂಗಸಭೆ ನಡೆಯಲಿದೆ. ಈ ವೇಳೆ ಭಾರತ-ಅಮೆರಿಕಾ ನಡುವಿನ ಮುನಿಸು ಮರೆಯಾಗಬಹುದಾ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ