ಯುದ್ಧ : ಕೀವ್‍ನಲ್ಲಿ ಕರ್ಫ್ಯೂ ಜಾರಿ !

ಬುಧವಾರ, 16 ಮಾರ್ಚ್ 2022 (07:50 IST)
ಕೀವ್ : ಉಕ್ರೇನ್ ವಿರುದ್ಧ ಸತತ 20ನೇ ದಿನವೂ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ.

ರಷ್ಯಾ ದಾಳಿಯಿಂದ ತತ್ತರಿಸಿರುವ ಕೀವ್ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಡೀ ಖೇರ್ಸಾನ್ ಪ್ರಾಂತ್ಯವನ್ನು ರಷ್ಯಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ.

ಕೀವ್ ನಗರದ ಜನವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮುಂದುವರಿಸಿದೆ. ಕೀವ್ ಮೆಟ್ರೋ ಸ್ಟೇಷನ್ ಮೇಲೆಯೂ ದಾಳಿ ನಡೆಸಿದೆ.

ಅಲ್ಲದೇ, ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಕೆ ಕಟ್ ಮಾಡುವ ಕಸರತ್ತನ್ನು ರಷ್ಯಾ ಆರಂಭಿಸಿದ್ದು, ಇದರ ಭಾಗವಾಗಿ ಡಿನಿಪ್ರೋ ಏರ್ಪೋರ್ಟ್ನ ರನ್ವೇಯನ್ನು ಹಾಳುಗೆಡವಿದೆ. ಕಳೆದ 24 ಗಂಟೆಯಲ್ಲಿ ಉಕ್ರೇನ್ ಸೇನೆ 13 ಡ್ರೋನ್, 16 ಸೈನಿಕ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. 

ಉಕ್ರೇನ್ ಸೇನೆ ಕೂಡ ಪ್ರತಿ ದಾಳಿ ಸಂಘಟಿಸಿದ್ದು, ರಷ್ಯಾದ ನಾಲ್ಕು ಹೆಲಿಕಾಪ್ಟರ್ ಪತನ ಗೊಳಿಸಿದೆ. ರಷ್ಯಾದ ವಿರುದ್ಧ ನಾವು ಎಲ್ಲಾ ಕಡೆ ಮೇಲುಗೈ ಸಾಧಿಸ್ತಿದ್ದೇವೆ. ಸ್ವಾತಂತ್ರ್ಯ ಬೇಕು ಎಂದರೇ, ಒಂದಿಷ್ಟನ್ನು ಕಳೆದುಕೊಳ್ಳಲೇಬೇಕು. ಅದಕ್ಕಾಗಿಯೇ ನಮ್ಮ ಹೋರಾಟ ಎಂದು ಉಕ್ರೇನ್ ಹೋರಾಟವನ್ನು ಬಲ ಪಡಿಸಿಕೊಂಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ