ಟೆರೇಸ್‍ನ ಮೆಟ್ಟಿಲಿನಲ್ಲಿ ಬಿದ್ದು ಒದ್ದಾಡಿದ ಪುಟಿನ್?

ಸೋಮವಾರ, 5 ಡಿಸೆಂಬರ್ 2022 (13:13 IST)
ಮಾಸ್ಕ್ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾಸ್ಕೋದಲ್ಲಿರುವ ತಮ್ಮ ಮನೆಯ ಟೆರೇಸ್ನ ಮೆಟ್ಟಿಲಿನಲ್ಲಿ ಬಿದ್ದು ಒದ್ದಾಡಿರುವುದಾಗಿ ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 70 ವರ್ಷದ ಪುಟಿನ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಾಸ್ಕೋದಲ್ಲಿರುವ ತಮ್ಮ ಮನೆಯ ಟೆರೇಸ್ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮೆಟ್ಟಿಲಿನಿಂದ ಬಿದ್ದಿದ್ದಾರೆ.

5 ಮೆಟ್ಟಿಲುಗಳಲ್ಲಿ ಬಿದ್ದು ಹೊರಳಾಡಿರುವ ಪುಟಿರನ್ನು ಸಿಬ್ಬಂದಿ ಎಬ್ಬಿಸಿ ಬಳಿಕ ಕೂರಿಸಿದ್ದಾರೆ ಎಂದು ವೀಡಿಯೋ ಒಂದನ್ನು ನ್ಯೂಯಾರ್ಕ್ನ ಟೆಲಿಗ್ರಾಮ್ ಚಾನಲ್ ಬಿಡುಗಡೆಗೊಳಿಸಿದೆ. 

ಪುಟಿನ್ ಕಳೆದ ತಿಂಗಳು ಅವರ ಕ್ಯೂಬನ್ ಕೌಂಟರ್ಪಾರ್ಟ್ ಮಿಗುಯೆಲ್ ಡಯಾಜ್-ಕ್ಯಾನೆಲ್ ಅವರೊಂದಿಗಿನ ಸಭೆಯನ್ನು ಆರೋಗ್ಯ ಸಮಸ್ಯೆಯಿಂದ ರದ್ದುಪಡಿಸಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಪುಟಿನ್ ಕೈನಡುಗುತ್ತಿರುವುದು ಮತ್ತು ಕಾಲುಗಳಲ್ಲಿ ನಿಲ್ಲಲಾಗದೆ ಕುಸಿದು ಬಿದ್ದಿರುವುದು ಗೋಚರಿಸಿದ್ದು, ಇದೀಗ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ