ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ : ಪುಟಿನ್
ತನ್ನ ಕನಸಿನ ಕ್ರಿಮಿಯಾ ಸೇತುವೆಯನ್ನು ಉಕ್ರೇನ್ ಉಡೀಸ್ ಮಾಡಿದ ಬಳಿಕ ಡೆಡ್ಲಿ ರಾಕೆಟ್ಗಳ ಮೂಲಕ ಸತತ ದಾಳಿ ನಡೆಸಿದ ರಷ್ಯಾ ಇದೀಗ ಕ್ಷಿಪಣಿ ದಾಳಿ ನಡೆಸುವುದಿಲ್ಲ.
ಪಾಶ್ಚಿಮಾತ್ಯ ದೇಶವನ್ನು ನಾಶಗೊಳಿಸುವುದು ಕ್ರೆಮ್ಲಿನ್ ಉದ್ದೇಶವಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದೆ. ರಷ್ಯಾದ ಮಾರಣಾಂತಿಕ ಕ್ಷಿಪಣಿ ದಾಳಿಯು ಉಕ್ರೇನ್ನ ಹಲವು ಮೂಲ ಸೌಕರ್ಯಗಳಿಗೆ ಹೊಡೆತ ನೀಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯಿಸಿ, ಉಕ್ರೇನ್ ವಿರುದ್ಧ ವ್ಯಾಪಕ ದಾಳಿಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.