ಚೀನಾದಲ್ಲಿ ಆಚರಿಸಲಾಗುತ್ತದೆ ಲೈಂಗಿಕ ಹಬ್ಬ

ಶುಕ್ರವಾರ, 8 ಡಿಸೆಂಬರ್ 2023 (13:49 IST)
ದೇಶದ ಅವಿವಾಹಿತರಿಗೆ ವಿವಾಹಿತರಿಗೆ ಮತ್ತು ಯುವಕರ ಮನವನ್ನು ತಣಿಸಲು ಲೈಂಗಿಕ ಹಬ್ಬವನ್ನು ಆಚರಿಸಲಾಗುತ್ತದೆ. ಚೀನಾದಲ್ಲಿ ಕುಟುಂಬಕ್ಕೊಂದು ಮಗು ನೀತಿ ಜಾರಿಯಲ್ಲಿದ್ದು, ಲೈಂಗಿಕತೆ ಬಗ್ಗೆ ವಿಶಾಲ ಮನೋಭಾವ ಹೊಂದಿದೆ, ಗರ್ಭಪಾತ ಕಾನೂನು ಬದ್ದವಾಗಿದೆ.
 
ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನ್ಯಾಷನಲ್ ಸೆಕ್ಸ್ ಕಲ್ಚರ್ ಫೆಸ್ಟಿವಲ್ ಆರಂಭವಾಗಿದೆ. ಆರೋಗ್ಯಕರ ಸೆಕ್ಸ್ ಆರೋಗ್ಯಕರ ಕುಟುಂಬ ಎನ್ನುವ ಧ್ಯೇಯ ಹೊಂದಿದೆ.
 
ಸೆಕ್ಸ್ ಮೇಳದಲ್ಲಿ ಮಧ್ಯಮ ವರ್ಗದ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ತಮ್ಮ ತಮ್ಮ ಕ್ಯಾಮರಾಗಳಲ್ಲಿ ಸುಂದರಿಯರನ್ನು ಸೆರೆಹಿಡಿದು ಸಂತಸ ಪಡೆಯುತ್ತಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
 
ಚೀನಾದಲ್ಲಿ ವೇಶ್ಯಾವಾಟಿಕೆ ಮೂರ್ಖರ ತಾಣವಲ್ಲ. ದೇಶಾದ್ಯಂತ ಮಸಾಜ್ ಪಾರ್ಲರ್‌ಗಳು ತಲೆ ಎತ್ತಿದ್ದು ಗ್ರಾಹಕರಿಗೆ ಸೆಕ್ಸ್ ಸೇವೆಯನ್ನು ನೀಡುತ್ತಿವೆ. ವೇಶ್ಯೆಯರು ಹೋಟೆಲ್‌ಗಳಿಗೆ ಕರೆ ಮಾಡಿ ದೇಹದ ಸೇವೆಯನ್ನು ಒದಗಿಸುವುದಾಗಿ ಗ್ರಾಹಕರ ಮನವೊಲಿಸುತ್ತಾರೆ.
 
ವಿಶ್ವದಲ್ಲಿಯೇ ಚೀನಾದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸೆಕ್ಸ್ ಟಾಯ್ಸ್‌ಗಳನ್ನು ಉತ್ಪಾದಿಸುವ ರಾಷ್ಟ್ರವಾಗಿದೆ. ದೇಶದಲ್ಲಿರುವ 1 ಸಾವಿರ ಕಂಪೆನಿಗಳು ವಾರ್ಷಿಕವಾಗಿ 2 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ