ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ವಿಡಿಯೋ ತೆಗೆದ ದುಷ್ಟರು

ಶುಕ್ರವಾರ, 8 ಡಿಸೆಂಬರ್ 2023 (12:35 IST)
ಪ್ರೇಮಿಗಳು ಹೋಟೆಲ್‌ನಲ್ಲಿ ಊಟ ಮುಗಿಸಿ ಮನೆಗೆ ತೆರಳಲು ಕಾರಿನಲ್ಲಿ ಕುಳಿತಿರುವಾಗ ಬೈಕ್‌ನಲ್ಲಿ ಬಂದ ಐವರು ಆರೋಪಿಗಳು ಪ್ರೇಮಿಗಳನ್ನು ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ, ಬಟ್ಟೆ ಬಿಚ್ಚಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದ್ದಲ್ಲದೇ 25 ಲಕ್ಷ ರೂಪಾಯಿಗಳನ್ನು ನೀಡದಿದ್ದಲ್ಲಿ ವಿಡಿಯೋ ದೃಶ್ಯಗಳನ್ನು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.
 
ಆಘಾತಕಾರಿ ಘಟನೆಯೊಂದರಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕಾರಿನಲ್ಲಿದ್ದ ಪ್ರೇಮಿಗಳನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರ ತೆಗೆದ ಹೇಯ ಘಟನೆ ವರದಿಯಾಗಿದೆ
 
ಪ್ರೇಮಿಗಳು ಪೊಲೀಸರಿಗೆ ನೀಡಿದ ಪ್ರಕಾರ, ರಾತ್ರಿ 11 ಗಂಟೆಗೆ ಊಟಕ್ಕೆ ಹೋಟೆಲ್‌‌ಗೆ ತೆರಳಿದ್ದು ಊಟ ಮುಗಿಸಿದ ನಂತರ ಕಾರಿನಲ್ಲಿ ಕುಳಿತಾಗ ಹಟಾತ್ತನೆ ಐವರು ಆರೋಪಿಗಳು ಕಾರಿನೊಳಗೆ ನುಗ್ಗಿ ಯುವಕನನ್ನು ಹೊರಗೆಳೆದು ಜಾತಿಯನ್ನು ಪ್ರಶ್ನಿಸಿದ್ದಾರೆ.

ಜಾತಿ ತಿಳಿದ ನಂತರ ಹಲ್ಲೆ ಮಾಡಿದ್ದಾರೆ. ನಂತರ ಇಬ್ಬರ ಕಣ್ಣಿಗೆ ಬಟ್ಟೆ ಕಟ್ಟಿ ಸುಮಾರು 40 ನಿಮಿಷಗಳ ಕಾಲ ಕಾರಿನಲ್ಲಿ ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಸೆಕ್ಸ್‌ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿ ವಿಡಿಯೋ ಚಿತ್ರವನ್ನು ತೆಗೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ