ಹಿಂಸಾಚಾರಕ್ಕೆ ಆರ್‌ಎಸ್‌ಎಸ್, ಬಿಜೆಪಿಯೇ ಹೊಣೆ : ಶೆಹಬಾಜ್ ಷರೀಫ್ ಆಪ್ತ

ಶುಕ್ರವಾರ, 12 ಮೇ 2023 (16:06 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದೆ. ಹಲವು ನಗರಗಳಲ್ಲಿ ನಡೆದಿರುವ ಘರ್ಷಣೆಗೆ ಹತ್ತಾರು ಜನ ಬಲಿಯಾಗಿ ನೂರಾರು ಜನರು ಗಾಯಗೊಂಡಿದ್ದಾರೆ.

ಇದೀಗ ಪಾಕಿಸ್ತಾನದಲ್ಲಿ ಮುಂದುವರಿದಿರುವ ಈ ಎಲ್ಲಾ ಹಿಂಸಾಚಾರಕ್ಕೂ ಬಿಜೆಪಿ ಹಾಗೂ ಆರ್ಎಸ್ಎಸ್ ಹೊಣೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಅವರ ಆಪ್ತರೊಬ್ಬರು ಆರೋಪಿಸಿದ್ದಾರೆ.

ಪಾಕಿಸ್ತಾನದ ಹಿಂಸಾಚಾರದ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಷರೀಫ್ ಆಪ್ತ ಸಹಾಯಕ ಅತ್ತ ತರಾರ್, ಪಾಕಿಸ್ತಾನದಲ್ಲಿ ಬೆಂಕಿ ಹಚ್ಚುತ್ತಿರುವ ಹಾಗೂ ವಿಧ್ವಂಸಕರ ಕೃತ್ಯಗಳಲ್ಲಿ ಭಾಗಿಯಾದವರು ಎಲ್ಲರೂ ಭಾರತದ ಆರ್ಎಸ್ಎಸ್ ಹಾಗೂ ಬಿಜೆಪಿಯಿಂದ ಕಳುಹಿಸಲ್ಪಟ್ಟವರು. ಇಷ್ಟಕ್ಕೇ ನಿಲ್ಲದೇ ಪಾಕಿಸ್ತಾನದ ಪರಿಸ್ಥಿತಿಯನ್ನು ಕಂಡು ಭಾರತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ