ಮಾತುಕತೆಗೆ ಒಪ್ಪಿದ ರಷ್ಯಾ?

ಶನಿವಾರ, 26 ಫೆಬ್ರವರಿ 2022 (07:50 IST)
ಮಾಸ್ಕೋ : ರಷ್ಯಾ ಉಕ್ರೇನ್ ನಡುವಿನ ಯುದ್ಧಕ್ಕೆ ಇತರ ರಾಷ್ಟ್ರಗಳ ವಿರೋಧದ ಬೆನ್ನಲ್ಲೆ ರಷ್ಯಾ ಉಕ್ರೇನ್ ಜೊತೆಗೆ ಮಾತುಕತೆಗೆ ನಾವು ಸಿದ್ಧ ಎಂದು ತಿಳಿಸಿದೆ ಎಂದು ಮೂಲಗಳಿಂದ ವರದಿಯಾಗಿದೆ.
 
ಉಕ್ರೇನ್ ಜೊತೆಗಿನ ಯುದ್ಧವನ್ನು ನಿಲ್ಲಿಸಲು ನಾವು ಸಿದ್ಧ, ಮಾತುಕತೆಗೆ ನಿಯೋಗ ಕಳುಹಿಸಲಿ ಎಂದು ರಷ್ಯಾ ತಿಳಿಸಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ನಾವು ಮಾತುಕತೆಗೆ ಸಿದ್ಧರಿದ್ದೇವೆ.

ಉಕ್ರೇನ್ ಸೇನೆಯು ಹೋರಾಟವನ್ನು ನಿಲ್ಲಿಸಿದ ನಂತರ ಮಾತುಕತೆಗೆ ನಾವು ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. 

ರಷ್ಯಾ ದಾಳಿ ನಡೆಸುತ್ತಿದ್ದಂತೆ ಉಕ್ರೇನ್ ಕೂಡ ಭಾರಿ ಪ್ರತಿರೋಧ ಒಡ್ಡಿದೆ. ಈಗಾಗಲೇ 1,000ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ತಿಳಿಸಿದೆ. ರಷ್ಯಾ ಸೇನೆ ತನ್ನ ದಾಳಿಯನ್ನು ಇನ್ನಷ್ಟು ಚುರುಕುಗೊಳಿಸಿದ್ದು ಉಕ್ರೇನ್ ರಾಜಧಾನಿ ಕೀವ್ನಿಂದ 7 ಕೀ.ಮೀ. ದೂರದಲ್ಲಿ ರಷ್ಯಾ ಸೇನೆ ಕೆಲವೇ ಗಂಟೆಗಳಲ್ಲಿ ಕೀವ್ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ