ಉಕ್ರೇನ್: ಇತ್ತೀಚೆಗಷ್ಟೇ ಭಾರತದ ಪ್ರಧಾನಿ ಮೋದಿ ಉಕ್ರೇನ್ ಗೆ ಭೇಟಿ ನೀಡಿ ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಮಾತನಾಡಿದ ಬೆನ್ನಲ್ಲೇ ಇದೀಗ ರಷ್ಯಾ ಭಾರೀ ದಾಳಿ ನಡೆಸಿದೆ.
ಉಕ್ರೇನ್ ಮೇಲೆ ರಷ್ಯಾ ಡ್ರೋಣ್, ಮಿಸೈಲ್ ಮೂಲಕ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದೆ. ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಬಹುಮಹಡಿ ಕಟ್ಟಡವೊಂದನ್ನು ಧ್ವಂಸ ಮಾಡಲಾಗಿದೆ. ಇದರಿಂದಾಗಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಉಕ್ರೇನ್ ನ ಕ್ವೀವ್ ನಗರವನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ. ಇದಕ್ಕೆ ಮೊದಲು ರಷ್ಯಾದ ಇಂಧನ ಸಂಸ್ಕರಣಾ ಘಟಕವನ್ನು ಗುರಿಯಾಗಿರಿಸಿ ಉಕ್ರೇನ್ ದಾಳಿ ನಡೆಸಿದೆ ಎಂದು ವರದಿಯಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಈಗ ರಷ್ಯಾ ಭಾರೀ ಪ್ರಮಾಣದಲ್ಲಿ ದಾಳಿ ಮಾಡಿ ತಿರುಗೇಟು ಕೊಟ್ಟಿದೆ.
ಇತ್ತೀಚೆಗೆ ಉಕ್ರೇನ್ ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಧ್ಯಕ್ಷ ಝೆಲೆನ್ಸ್ಕಿ ಮೋದಿಯಿಂದ ಮಾತ್ರ ರಷ್ಯಾ-ಉಕ್ರೇನ್ ಯುದ್ಧ ತಡೆಯಲು ಸಾಧ್ಯ ಎಂದಿದ್ದರು. ಎರಡು ವರ್ಷಗಳ ನಡುವೆ ಯುದ್ಧ ಆರಂಭವಾಗಿ ಎರಡು ವರ್ಷವೇ ಕಳೆಯುತ್ತಾ ಬಂದಿದೆ. ಆದರೆ ಇದುವರೆಗೆ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ.