ಕಪ್ಪು ಸಮುದ್ರದಲ್ಲಿ ಪತ್ತೆಯಾಯ್ತು ರಷ್ಯನ್ ವಿಮಾನದ ಅವಶೇಷ

ಭಾನುವಾರ, 25 ಡಿಸೆಂಬರ್ 2016 (14:23 IST)
ರಾಡಾರ್ ಸಂಪರ್ಕ ಕಳೆದುಕೊಂಡಿದ್ದ ರಷ್ಯಾದ ಮಿಲಿಟರಿ ವಿಮಾನದ ಅವಶೇಷಗಳು ಕಪ್ಪು ಸಮುದ್ರದಲ್ಲಿ ಪತ್ತೆಯಾಗಿದೆ.
 
ಸೋಚಿ ಬಳಿ ಕಪ್ಪು ಸಮುದ್ರದ 50ರಿಂದ 60 ಮೀಟರ್ ಆಳದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. 
 
ಇಂದು ಮುಂಜಾನೆ ರಷ್ಯಾದ ಸೋಚಿಯಿಂದ ಸಿರಿಯಾದ ಲಟಾಕಿಗೆ ತೆರಳುತ್ತಿದ್ದ ಟಿಯು 154 ವಿಮಾನ ಟೇಕ್ ಆಫ್ ಆದ 20 ನಿಮಿಷಗಳಲ್ಲಿ ರಾಡರ್ ಸಂಪರ್ಕ ಕಡಿದುಕೊಂಡಿತ್ತು. ನಸುಕಿನ ಜಾವ 5.20ಕ್ಕೆ ಹೊರಟಿದ್ದ ವಿಮಾನ 5.40ಕ್ಕೆ ನಾಪತ್ತೆಯಾಗಿತ್ತು.
 
ವಿಮಾನದಲ್ಲಿ 9 ಮಂದಿ ಪತ್ರಕರ್ತರು, ಸೇನಾ ಸಿಬ್ಬಂದಿ ಮತ್ತು ರಷ್ಯಾದ ಸಶಸ್ತ್ರ ಪಡೆಗಳ ಅಧಿಕೃತ ಸೇನೆ ವಾದ್ಯಮೇಳ ಅಲೆಕ್ಸಾಂಡರ್ ಎನ್ಸೆಂಬಲ್ ಸದಸ್ಯರು, 10 ಮಂದಿ ವಿಮಾನ ಸಿಬ್ಬಂದಿ ಸೇರಿದಂತೆ 91 ಜನರಿದ್ದರು. ವಿಮಾನ ಸಂಪರ್ಕ ಕಳೆದುಕೊಂಡ ತಕ್ಷಣ ಶೋಧ ಕಾರ್ಯವನ್ನು ಆರಂಭಿಸಲಾಗಿತ್ತು.
 
ವಿಮಾನ ತಾಂತ್ರಿಕ ದೋಷದಿಂದ ಪತನವಾಗಿದೆಯೋ ಅಥವಾ ಇದರ ಹಿಂದೆ ಭಯೋತ್ಪಾದಕರ ದಾಳಿಗೊಳಗಾಗಿದೆಯೋ ಎಂದು ರಷ್ಯಾ ಅಧಿಕಾರಿಗಳು ವಿಮಾನದ ಪತ್ತೆಗಾಗಿ ಶೋಧ ನಡೆಸಿದ್ದಾರೆ.
 
ಒಟ್ಟಾರೆ 2016ರಲ್ಲಿ ಸಂಭವಿಸಿದ 22ನೇ ವಿಮಾನ ಅಪಘಾತ ಇದಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ