ಉಕ್ರೇನ್ ಅಣುಸ್ಥಾವರದ ಮೇಲೆ ರಷ್ಯಾ ದಾಳಿ!
ಇಂದು ಮುಂಜಾನೆ 3 ಗಂಟೆ ಸುಮಾರಿಗೆ ರಷ್ಯಾ ಸೇನೆಯಿಂದ ಜಪೋರಿಝಿಯಾ ಅಣುಸ್ಥಾವರ ಮೇಲೆ ದಾಳಿ ನಡೆದಿದೆ. ಯುರೋಪಿನಲ್ಲಿಯೇ ಅತೀ ದೊಡ್ಡದಾದ ಅಣುಸ್ಥಾವರ ಇದಾಗಿದೆ. ಇದೀಗ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಣುಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಎನರ್ಗೋಡರ್ನ ಮೇಯರ್ ಹೇಳಿದ್ದಾರೆ.
ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಕಟ್ಟಡ ಹಾಗೂ ಘಟಕಗಳ ಶತ್ರುಗಳ ನಿರಂತರ ಶೆಲ್ ದಾಳಿಗೊಳಗಾಗಿದ್ದು, ಪರಿಣಾಮವಾಗಿ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಧಗಧಗಿಸುತ್ತಿದೆ. ಒಂದು ವೇಳೆ ಈ ಅಣುಸ್ಥಾವರ ಸ್ಫೊಟಗೊಂಡರೆ 1986ರ ಚರ್ನೋಬೆಲ್ ದುರಂತಕ್ಕಿಂತ 10 ಪಟ್ಟು ಭೀಕರವಾಗಲಿದೆ.