ನವದೆಹಲಿ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಗರೋತ್ತರ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಮತ್ತೆ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನಕ್ಕೆ ಹೋದರೆ ನನಗೆ ಮನೆಗೇ ಹೋದಂತೆ ಭಾಸವಾಗುತ್ತದೆ ಎಂದಿದ್ದಾರೆ.
ಪಾಕಿಸ್ತಾನಕ್ಕೆ ಹೋದರೆ ನನಗೆ ಮನೆಗೇ ಹೋದಂತೆ ಭಾಸವಾಗುತ್ತದೆ. ಕೇಂದ್ರ ಸರ್ಕಾರವು ಮುಖ್ಯವಾಗಿ ವಿದೇಶಾಂಗ ನೀತಿಯನ್ನು ನೆರೆಹೊರೆಯ ದೇಶಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಅವರು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಬಿಜೆಪಿ ಟೀಕಾಸ್ತ್ರ ಹರಿಸಿದೆ.
ಯಾಕೋ ಸ್ಯಾಮ್ ಪಿತ್ರೋಡಾ ಪಾಕಿಸ್ತಾನವನ್ನೇ ತಮ್ಮ ತವರು ಎಂದು ಭಾವಿಸಿದಂತಿದೆ ಎಂದು ಬಿಜೆಪಿ ಲೇವಡಿ ಮಾಡಿದ್ದಾರೆ. ಇದಕ್ಕೇ ಕಾಂಗ್ರೆಸ್ ಪಾಕಿಸ್ತಾನವನ್ನು ಅಷ್ಟೊಂದು ಪ್ರೀತಿ ಮಾಡೋದು ಎಂದು ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ.
ಈ ಹಿಂದೆ ಲೋಕಸಭೆ ಚುನಾವಣೆ ವೇಳೆ ಭಾರತೀಯರು ತಮ್ಮ ಪಿತ್ರಾರ್ಜಿತ ಆಸ್ತಿಯ ಶೇ.50 ರಷ್ಟನ್ನು ಸರ್ಕಾರಕ್ಕೆ ಒಪ್ಪಿಸುವ ನಿಯಮ ಕಾಂಗ್ರೆಸ್ ತರಲಿದೆ ಎಂದಿದ್ದಕ್ಕೆ ಪಿತ್ರೋಡಾ ಕೆಲವು ಸಮಯ ಪದವಿ ಕಳೆದುಕೊಂಡಿದ್ದರು. ಇತ್ತೀಚೆಗೆ ಚೀನಾದವರನ್ನು ಹಾಡಿ ಹೊಗಳಿದ್ದರು. ಇದೀಗ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ.