ಪ್ಲಾಸ್ಟಿಕ್ ಕರಗಿಸಿ ಪೆಟ್ರೋಲ್, ಡಿಸೇಲ್ ತಯಾರಿಸುವ ಯಂತ್ರ ಕಂಡುಹಿಡಿದ ಫ್ರಾನ್ಸ್ ವಿಜ್ಞಾನಿಗಳು
ಶುಕ್ರವಾರ, 23 ಆಗಸ್ಟ್ 2019 (09:31 IST)
ಫ್ರಾನ್ಸ್ : ಮಣ್ಣಲ್ಲಿ ಕರಗದೆ ಪರಿಸರವನ್ನು ಹಾಳುಮಾಡುತ್ತಿದ್ದ ಪ್ಲಾಸ್ಟಿಕ್ ನ್ನು ಕರಗಿಸಿ ಅದರಿಂದ ಉಪಯುಕ್ತ ವಸ್ತುಗಳನ್ನು ತಯಾರಿಸುವಂತಹ ಹೊಸ ಆವಿಷ್ಕಾರವನ್ನು ಫ್ರಾನ್ಸ್ ವಿಜ್ಞಾನಿಗಳು ಮಾಡಿದ್ದಾರೆ.
ಹೌದು. ಫ್ರಾನ್ಸ್ ವಿಜ್ಞಾನಿಗಳು ಪ್ಲಾಸ್ಟಿಕ್ ಕರಗಿಸುವ ಯಂತ್ರವನ್ನು ಕಂಡುಹಿಡಿದಿದ್ದು, ಇದರಲ್ಲಿ 450 ಡಿಗ್ರಿ ಸೆಲ್ಸಿಯಸ್ ಶಾಖವಿಟ್ಟು, ಪ್ಲಾಸ್ಟಿಕ್ ಅನ್ನು ಯಂತ್ರದೊಳಕ್ಕೆ ಹಾಕಿದರೆ ಪ್ಲಾಸ್ಟಿಕ್ ಕರಗಿ ದ್ರವ ರೂಪದ ತೈಲವನ್ನು ಬಿಡುಗಡೆ ಮಾಡುತ್ತದೆ. ಇದು ಶೇ. 65 ರಷ್ಟು ಡೀಸೆಲ್ ಹೊಂದಿರುತ್ತದೆ. ಇದನ್ನು ಜನರೇಟೆರ್ ಹಾಗೂ ಮೋಟಾರ್ ಬೋಟ್ಗಳಿಗೆ ಬಳಕೆ ಮಾಡಬಹುದು ಎನ್ಬಲಾಗಿದೆ.
ಅಲ್ಲದೇ ಇದರಿಂದ ಶೇ. 18ರಷ್ಟು ಪೆಟ್ರೋಲ್, ಶೇ. 10 ರಷ್ಟು ಗ್ಯಾಸ್ ಹಾಗೂ ಶೇ.7 ರಷ್ಟು ಕ್ರೆಯಾನ್ಸ್ ಮತ್ತು ಬಣ್ಣದ ಪೆನ್ಸಿಲ್ ತಯಾರಿಸಬಹುದಾದ ಕಾರ್ಬನ್ ದೊರೆಯುತ್ತದೆಯಂತೆ. ಈ ಮೆಷೀನ್ ನ ಬೆಲೆ 370 ರೂ.ಗಳಾಗಿದ್ದು, ಇದು ತಿಂಗಳಿಗೆ 10 ಟನ್ ಪ್ಲಾಸ್ಟಿಕ್ ತೈಲವನ್ನು ಮಾರ್ಪಾಡು ಮಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ.