ಪ್ಲಾಸ್ಟಿಕ್ ಬಕೆಟ್ ಗಳಲ್ಲಿರುವ ನೀರಿನ ಕಲೆ ಹೋಗಲಾಡಿಸಲು ಈ ಮಿಶ್ರಣದಿಂದ ಉಜ್ಜಿ ತೊಳೆಯಿರಿ
ಶನಿವಾರ, 17 ಆಗಸ್ಟ್ 2019 (07:38 IST)
ಬೆಂಗಳೂರು : ನೀರನ್ನು ತುಂಬಿಸಿಡಲು, ಸ್ನಾನ ಮಾಡಲು ಪ್ಲಾಸ್ಟಿಕ್ ಬಕೆಟ್ ಹಾಗೂ ಜಗ್ ಗಳನ್ನು ಗಳನ್ನು ಬಳಸುತ್ತೇವೆ. ಆದರೆ ಈ ಬಕೆಟ್ ಗಳ ಮೇಲೆ ನೀರಿನ ಕಲೆ ಬಿದ್ದಿರುತ್ತದೆ. ಇದನ್ನು ಹೋಗಲಾಡಿಸಲು ಈ ಮಿಶ್ರಣದಿಂದ ಉಜ್ಜಿ ತೊಳೆಯಿರಿ.
ಬೇಕಿಂಗ್ ಸೋಡಾ, ಚಮಚ ವಿನೆಗರ್ ಹಾಕಿ ಮಿಕ್ಸ್ ಮಾಡಿ ಅದನ್ನು ಸ್ಕ್ರಬ್ ನಿಂದ ತಿಕ್ಕಿ ನಂತರ ಬಕೆಟ್ ಹಾಗೂ ಜಗ್ ಗಳನ್ನು ತೊಳೆಯಿರಿ ಇದರಿಂದ ಕಲೆಗಳು ಮಂಗಮಾಯವಾಗಿ ಬಕೆಟ್ ತಳತಳ ಹೊಳೆಯುತ್ತದೆ.
ಹಾಗೇ ಹಾರ್ಪಿಕ್ ನಿಂದ ಬಕೆಟ್ ಉಜ್ಜಿ ತೊಳೆದರೂ ಕೂಡ ನೀರಿನ ಕಲೆಗಳು ಹೋಗುತ್ತವೆ.