ವಿಶ್ವದಲ್ಲಿಯೇ ವೇಶ್ಯಾವಾಟಿಕೆಯಲ್ಲಿ ಚೀನಾಗೆ ಅಗ್ರ ಸ್ಥಾನ, ಭಾರತಕ್ಕೆ ಆರನೇ ಸ್ಥಾನ

ಮಂಗಳವಾರ, 16 ಆಗಸ್ಟ್ 2016 (19:04 IST)
ವೇಶ್ಯಾವಾಟಿಕೆ ಅಧಿಕೃತವಾಗಿರಲಿ ಅಥವಾ ಅನಧಿಕೃತವಾಗಿರಲಿ. ಆದರೆ, ಇದೀಗ ವಿಶ್ವದಲ್ಲಿಯೇ ಹೆಮ್ಮರವಾಗಿ ಬೆಳೆದು ನಿಂತು ನೂರಾರು ಬಿಲಿಯನ್ ಡಾಲರ್‌ಗಳಿಗಿಂತಲೂ ಹೆಚ್ಚಿನ ವಹಿವಾಟು ನಡೆಸುತ್ತಿದೆ.
 
ಇತ್ತೀಚೆಗೆ, ಹಾವೋಸ್ಕೋಪ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಂಸ್ಥೆ ವಿಶ್ವದ ಪ್ರತಿಯೊಂದು ದೇಶದ ಮಹಾನಗರಗಳ ವೇಶ್ಯಾವಾಟಿಕೆ ವಹಿವಾಟಿನ ಬಗ್ಗೆ ವರದಿಯ ಬೆಳಕು ಚೆಲ್ಲಿದೆ. ಸಂಸ್ಥೆಯ ವರದಿಯ ಪ್ರಕಾರ ವೇಶ್ಯಾವಾಟಿಕೆಯಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದರೆ, ಭಾರತ ಟಾಪ್ 10 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 
 
ವರದಿಯ ಪ್ರಕಾರ, ಚೀನಾ ವೇಶ್ಯಾವಾಟಿಕೆಯಲ್ಲಿ ವಿಶ್ವದಲ್ಲಿಯೇ ಅಗ್ರ ಸ್ಥಾನವನ್ನು ಪಡೆದಿದ್ದಲ್ಲದೇ ಸೆಕ್ಸ್ ಟಾಯ್ಸ್ ಉತ್ಪಾದನೆಯಲ್ಲೂ ಅಗ್ರ ಸ್ಥಾನ ಪಡೆದಿದೆ. ಖಚಿತವಾದ ಅಂಕಿ ಅಂಶಗಳ ಪ್ರಕಾರ, ವಿಶ್ವದಲ್ಲಿ ಉತ್ಪಾದಿಸಲಾಗುವ ಸೆಕ್ಸ್ ಟಾಯ್ಸ್‌ಗಳಲ್ಲಿ ಶೇ.70 ರಷ್ಟು ಉತ್ಪಾದನೆ ಚೀನಾ ದೇಶದ್ದಾಗಿದೆ. ದೇಶದಲ್ಲಿ ಸೆಕ್ಸ್ ಟಾಯ್ಸ್ ಉತ್ಪಾದವನೆ ವಹಿವಾಟು 2 ಬಿಲಿಯನ್ ಡಾಲರ್‌ಗೂ ಮೀರಿದೆ. ದೇಶಾದ್ಯಂತ 1 ಸಾವಿರಕ್ಕೂ ಹೆಚ್ಚು ಉತ್ಪಾದಕರಿದ್ದಾರೆ ಎಂದು ತಿಳಿಸಿದೆ. 
 
ಆಸಕ್ತಿಕರ ವಿಷಯವೆಂದರೆ, ದೇಶದಲ್ಲಿ ಅಧಿಕಾರರೂಢವಾಗಿರುವ ಕಮ್ಯೂನಿಷ್ಠ ಸರಕಾರ ವೇಶ್ಯಾವಾಟಿಕೆಯನ್ನು ನಿಷೇಧಿಸಿದೆ. ನಿಷೇಧದ ನಡುವೆಯೂ 73 ಮಿಲಿಯನ್ ಡಾಲರ್ ವೇಶ್ಯಾವಾಟಿಕೆ ವಹಿವಾಟು ನಡೆಯುತ್ತಿದೆ ಎನ್ನುವುದು ಆಘಾತಕಾರಿ ಅಂಶವಾಗಿದೆ. 
 
ಹಾವೋಸ್ಕೋಪ್ ವರದಿಯ ಪ್ರಕಾರ, ವೇಶ್ಯಾವಾಟಿಕೆ ಮಾರುಕಟ್ಟೆಯಲ್ಲಿ ಸ್ಪೇನ್ ದೇಶ 26.5 ಬಿಲಿಯನ್ ಡಾಲರ್ ವಹಿವಾಟಿನೊಂದಿಗೆ ಎರಡನೇ ಸ್ಥಾನ ಪಡೆದಿದೆ. ದೇಶದಲ್ಲಿ ವೇಶ್ಯಾವಾಟಿಕೆ ನಿಷೇಧವಿಲ್ಲವಾದರೂ ಪಿಂಪ್‌ಗಳು ಮತ್ತು ಸೆಕ್ಸ್‌ಗೆ ಒತ್ತಾಯಪೂರ್ವಕ ಆಹ್ವಾನಗಳಿಗೆ ನಿಷೇಧ ಹೇರಲಾಗಿದೆ.
 
ಜಪಾನ್ ದೇಶ ವೇಶ್ಯಾವಾಟಿಕೆಯಲ್ಲಿ ವಾರ್ಷಿಕ 24 ಬಿಲಿಯನ್ ಡಾಲರ್ ಆದಾಯದೊಂದಿಗೆ ಮೂರನೇ ಸ್ಥಾನವನ್ನು ಪಡೆದಿದೆ. 
 
ದಕ್ಷಿಣ ಕೊರಿಯಾದಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರವಾಗಿದೆ. ಆದಾಗ್ಯೂ 12 ಬಿಲಿಯನ್ ಡಾಲರ್ ವಹಿವಾಟಿನೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.
 
ವಿಶ್ವದ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿರುವ ಅಮೆರಿಕದಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರವಲ್ಲ. ವಾರ್ಷಿಕವಾಗಿ 14.6 ಬಿಲಿಯನ್ ಡಾಲರ್‌ ವಹಿವಾಟು ನಡೆಸಿ ಐದನೇ ಸ್ಥಾನ ಪಡೆದಿದೆ.
 
ಭಾರತ ದೇಶದಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧವಾಗಿದ್ದರೂ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವುದು ವೇಶ್ಯಾಗೃಹ ಹೊಂದುವುದು, ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ, ಕಾನೂನುಬಾಹಿರವಾಗಿದೆ. ವೇಶ್ಯಾವಾಟಿಕೆ ಉದ್ಯಮದಲ್ಲಿ ವಾರ್ಷಿಕವಾಗಿ 8.2 ಬಿಲಿಯನ್ ಡಾಲರ್ ನಡೆಸುವ ಮೂಲಕ ಆರನೇ ಸ್ಥಾನ ಪಡೆದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ