ಟ್ವಿಟ್ಟರ್‌ನ ಬ್ಲೂಟಿಕ್ ನನಗೆ ಬೇಡ ಎಂದ ಸ್ಟೀಫನ್ ಕಿಂಗ್

ಬುಧವಾರ, 26 ಏಪ್ರಿಲ್ 2023 (08:08 IST)
ವಾಷಿಂಗ್ಟನ್ : ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟ್ಟರ್ನ ಸಿಇಒ ಎಲೋನ್ ಮಸ್ಕ್ ಕೆಲ ಪ್ರಭಾವಿ ವ್ಯಕ್ತಿಗಳಿಗೆ ಟ್ವಿಟ್ಟರ್ ಖಾತೆಗಳಲ್ಲಿ ಬ್ಲೂ ಟಿಕ್ಗಳನ್ನು ಪಡೆಯಲು ತಾವೇ ಪಾವತಿ ಮಾಡುವುದಾಗಿ ತಿಳಿಸಿದ್ದರು.
 
ಆದರೆ ಈ ನೀಲಿ ಟಿಕ್ ನನಗೆ ಬೇಡ. ಬದಲಿಗೆ ಅದಕ್ಕೆ ವ್ಯಯಿಸಲಾಗುವ ಹಣವನ್ನು ಯುದ್ಧಪೀಡಿತ ಉಕ್ರೇನ್ಗೆ ಸಹಾಯ ಮಾಡಲು ದೇಣಿಗೆ ನೀಡಿ ಎಂದು ಅಮೆರಿಕದ ಜನಪ್ರಿಯ ಲೇಖಕ ಸ್ಟೀಫನ್ ಕಿಂಗ್  ಕಟುವಾಗಿಯೇ ಮಸ್ಕ್ಗೆ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಳ್ಳಲು ಪಾವತಿ ಮಾಡುವಂತಹ ಚಂದಾದಾರಿಕೆಯನ್ನು ಹೊರತಂದಿತ್ತು. ಕಳೆದ ವಾರ ಸೆಲೆಬ್ರಿಟಿ, ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಪಾವತಿ ಮಾಡದೇ ಹೋದ ಎಲ್ಲಾ ಬಳಕೆದಾರರ ಖಾತೆಗಳಲ್ಲಿ ನಿಲಿ ಟಿಕ್ ಮಾರ್ಕ್ ಮಾಯವಾಗಿತ್ತು.

ಬಳಿಕ ಕೆಲ ಪ್ರಭಾವಿ ವ್ಯಕ್ತಿಗಳ ಖಾತೆಗಳಲ್ಲಿ ನೀಲಿ ಟಿಕ್ ಮಾರ್ಕ್ಗಳು ಮತ್ತೆ ಗೋಚರಿಸತೊಡಗಿವೆ. ಈ ಪೈಕಿ ಹೆಚ್ಚಿನವರು ತಮ್ಮ ಪರಿಶೀಲಿಸಿದ ಖಾತೆಗಾಗಿ ಯಾವುದೇ ರೀತಿಯಲ್ಲಿ ಪಾವತಿ ಮಾಡಿಲ್ಲ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ