ವಿಚಿತ್ರ ಎನಿಸಿದರೂ ಇದು ಸತ್ಯ : ಉತ್ತರ ಕೊರಿಯಾದಲ್ಲಿದೆ ವಿಚಿತ್ರ ಕಾನೂನುಗಳು

ಗುರುವಾರ, 27 ಜುಲೈ 2023 (06:56 IST)
ಉತ್ತರ ಕೊರಿಯಾ ಎಂದು ಕರೆಯಲ್ಪಡುವ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಪೂರ್ವ ಏಷ್ಯಾದಲ್ಲಿ ನೆಲೆಗೊಂಡಿರೋ ವಿಶ್ವದಲ್ಲೇ ಅತ್ಯಂತ ದಮನಕಾರಿ ದೇಶ ಎಂಬ ಕುಖ್ಯಾತಿ ಹೊಂದಿದೆ.

ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಆಳ್ವಿಕೆ ನಡೆಸುತ್ತಿರೋ ಈ ನಿರಂಕುಶ ರಾಷ್ಟ್ರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಾ, ನಾಗರಿಕರ ಮೇಲೆ ವಿಚಿತ್ರ ಕಾನೂನುಗಳನ್ನು ಹೇರುತ್ತಿದೆ.
ಸುಮಾರು 2.6 ಕೋಟಿ ಜನಸಂಖ್ಯೆಯಿರೋ ಈ ರಾಷ್ಟ್ರದಲ್ಲಿ ಪ್ರಪಂಚಲ್ಲೇ ಬೇರೆಲ್ಲೂ ಇಲ್ಲದಂತಹ ಹಲವು ವಿಚಿತ್ರ ಕಾನೂನುಗಳಿವೆ. ಮಾನವ ಹಕ್ಕುಗಳನ್ನು ನಿರ್ನಾಮ ಮಾಡಿರೋ ದೇಶದ ಜನತೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಹಿಂದಿನಿಂದಲೂ ಕಳವಳ ವ್ಯಕ್ತಪಡಿಸಿದೆ. ಉತ್ತರ ಕೊರಿಯಾದಲ್ಲಿ ಜಾರಿಯಲ್ಲಿರೋ ಕೇಳರಿಯದ ವಿಚಿತ್ರ ಕಾನೂನುಗಳ ಪಟ್ಟಿ ಇಲ್ಲಿದೆ.

ವಿದೇಶಿ ಹಾಡು, ಚಲನಚಿತ್ರಕ್ಕಿಲ್ಲ ಅನುಮತಿ
ಉತ್ತರ ಕೊರಿಯಾದಲ್ಲಿ ವಿದೇಶಿ ಹಾಡು ಕೇಳುವುದು ಅಥವಾ ವಿದೇಶಿ ಚಲನಚಿತ್ರಗಳನ್ನು ವೀಕ್ಷಿಸುವುದು ಕಾನೂನು ಬಾಹಿರವಾಗಿದೆ. ಇವೆರಡನ್ನೂ ಅಲ್ಲಿ ಅಪರಾಧ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ತನ್ನ ಶತ್ರು ರಾಷ್ಟ್ರಗಳಾದ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಯಾವುದೇ ಹಾಡು ಅಥವಾ ಸಿನಿಮಾಗಳನ್ನು ವೀಕ್ಷಿಸಿದ್ದು ಗೊತ್ತಾದಲ್ಲಿ ಆ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗುತ್ತದೆ. ಜೊತೆಗೆ ಪೋರ್ನ್ ವೀಕ್ಷಿಸುವುದು ಕೂಡಾ ಅಲ್ಲಿ ಮರಣದಂಡನೆಗೆ ಕಾರಣವಾಗಬಹುದು.

ಅಂತಾರಾಷ್ಟ್ರೀಯ ಕರೆಗಳು ಅಪರಾಧ
ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವುದನ್ನು ಉತ್ತರ ಕೊರಿಯಾದಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸ್ಥಳೀಯ ನಾಗರಿಕರು ಮಾತ್ರವಲ್ಲ, ದೇಶದಲ್ಲಿರುವ ವಿದೇಶಿಗರು ಕೂಡಾ ಅಂತಾರಾಷ್ಟ್ರೀಯ ಕರೆ ಮಾಡಲು ಸಾಧ್ಯವಿಲ್ಲ. ಅಲ್ಲಿನ ಎಲ್ಲಾ ಸ್ಥಳೀಯ ಸಿಮ್ ಕಾರ್ಡ್ಗಳು ರಾಷ್ಟ್ರದೊಳಗೆ ಮಾತ್ರವೇ ಕರೆ ಮಾಡಲು ಅನುಮತಿಸುತ್ತದೆ.

ನೀಲಿ ಬಣ್ಣದ ಜೀನ್ಸ್ ಬ್ಯಾನ್
ಉತ್ತರ ಕೊರಿಯಾದಲ್ಲಿ ಜನರು ಜೀನ್ಸ್ ಧರಿಸುವುದನ್ನು ಕಾಣೋದೇ ವಿರಳ. ಏಕೆಂದರೆ ಅಲ್ಲಿ ನೀಲಿ ಬಣ್ಣದ ಜೀನ್ಸ್ ಅನ್ನು ನಿಷೇಧಿಸಲಾಗಿದೆ. ನೀಲಿ ಬಣ್ಣದ ಜೀನ್ಸ್ ತನ್ನ ದೇಶದ ಶತ್ರು ಅಮೆರಿಕದ ಪ್ರತೀಕ ಎಂದು ಭಾವಿಸಲಾಗುತ್ತದೆ. ಅಲ್ಲಿ ಕಪ್ಪು ಬಣ್ಣದ ಜೀನ್ಸ್ ಅನ್ನು ಧರಿಸಲು ಮಾತ್ರವೇ ಅವಕಾಶವಿದೆ. ಆದರೆ ಅದು ತನ್ನ ಬಣ್ಣ ಮಾಸದಂತೆ ನಿಭಾಯಿಸಲು ಸಾಧ್ಯವಿರುವವರು ಮಾತ್ರವೇ ಧರಿಸಬಹುದು.

ಮೀಟಿಂಗ್ ವೇಳೆ ನಿದ್ರೆ ಮಾಡೋದು ಅಪರಾಧ
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೊಂದಿಗಿನ ಸಭೆಯಲ್ಲಿ ನಿದ್ರೆ ಮಾಡೋದು ಅಥವಾ ತೂಕಡಿಸೋದು ಅಲ್ಲಿ ದೊಡ್ಡ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದು ಮರಣದಂಡನೆಗೆ ಕಾರಣವಾಗಬಹುದಾದ ಅಪರಾಧವಾಗಿದೆ. 2015ರಲ್ಲಿ ಉತ್ತರ ಕೊರಿಯಾದ ರಕ್ಷಣಾ ಸಚಿವ ಹ್ಯೋನ್ ಯೋಂಗ್ ಚೋಲ್ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನೊಂದಿಗಿನ ಸಭೆ ವೇಳೆ ಪ್ರಜ್ಞಾಹೀನರಾದ ಕಾರಣಕ್ಕೆ ಅವರನ್ನು 100 ಜನರ ಸಮ್ಮುಖದಲ್ಲಿ ಭೀಕರವಾಗಿ ಕೊಲ್ಲಲಾಗಿತ್ತು.

ಇಂಟೆರ್ನೆಟ್ ನಿರ್ಬಂಧ
ಉತ್ತರ ಕೊರಿಯಾದಲ್ಲಿ ‘ಕ್ವಾಂಗ್ಮಿಯಂಗ್’ ಹೆಸರಿನ ಏಕೈಕ ಇಂಟರ್ನೆಟ್ ಚಾಲಿತ ಪೋರ್ಟಲ್ ಇದೆ. ಇಲ್ಲಿ ಎಲ್ಲಾ ವಿದೇಶಿ ವೆಬ್ಸೈಟ್ಗಳನ್ನು ನಿರ್ಬಂಧಿಸಲಾಗಿದ್ದು, ಕೇವಲ 28 ವೆಬ್ಸೈಟ್ಗಳನ್ನು ಸರ್ಕಾರದ ಮೇಲ್ವಿಚಾರಣೆಯಲ್ಲಿ ಪ್ರವೇಶಿಸಬಹುದು. ಆದರೂ ಇದರ ಬಳಕೆ ದೇಶದ ಪ್ರತಿಯೊಬ್ಬ ಪ್ರಜೆಗೆ ಸಾಧ್ಯವಿಲ್ಲ.

ಬೈಬಲ್ ಬ್ಯಾನ್
ಉತ್ತರ ಕೊರಿಯಾದಲ್ಲಿ ಬೈಬಲ್ ಅನ್ನು ನಿಷೇಧಿಸಲಾಗಿದೆ. ಅಲ್ಲಿ ಬೈಬಲ್ ಅನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತಿನಿಧಿಯಾಗಿ ನೋಡಲಾಗುತ್ತದೆ. ಮಾತ್ರವಲ್ಲದೇ ಅದು ಜನರನ್ನು ಪರಿವರ್ತಿಸುತ್ತದೆ ಎಂಬ ಕಾರಣಕ್ಕೆ ದೇಶಾದ್ಯಂತ ಬೈಬಲ್ ಇಟ್ಟುಕೊಳ್ಳುವುದನ್ನೇ ಬ್ಯಾನ್ ಮಾಡಲಾಗಿದೆ.

ಬೇಕಿನಿಸಿದಂತೆ ಹೇರ್ ಕಟ್ ಮಾಡಿಸಿಕೊಳ್ಳುವಂತಿಲ್ಲ
ಉತ್ತರ ಕೊರಿಯಾದಲ್ಲಿ ಎಲ್ಲಾ ಪುರುಷರು ಹಾಗೂ ಮಹಿಳೆಯರು ಸರ್ಕಾರ ಅಧಿಕೃತಗೊಳಿಸಿರುವ 26 ರೀತಿಯ ಕೇಶವಿನ್ಯಾಸಗಳನ್ನಷ್ಟೇ ಮಾಡಿಕೊಳ್ಳಬಹುದು. ಈ 26 ರೀತಿಯ ಕೇಶವಿನ್ಯಾಸಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕೇಶವಿನ್ಯಾಸಗಳನ್ನು ನಿಷೇಧಿಸಲಾಗಿದೆ. ಕೆಲ ವರ್ಷಗಳ ಹಿಂದೆ ಜನಪ್ರಿಯವಾಗಿದ್ದ ಸ್ಪೈಕ್ಸ್ ಹೇರ್ ಸ್ಟೈಲ್ ಅನ್ನು ಉತ್ತರ ಕೊರಿಯಾದಲ್ಲಿ ಪ್ರತಿಭಟನೆ

 
ದೇಶ ತೊರೆಯಲು ಅವಕಾಶವಿಲ್ಲ

ಇಷ್ಟೊಂದು ಕಠಿಣ ಕಾನೂನುಗಳಿದ್ದರೂ ಉತ್ತರ ಕೊರಿಯನ್ನು ಯಾಕೆ ಅವೆಲ್ಲದರಿಂದ ತಪ್ಪಿಸಿಕೊಂಡು ಹೊರಬರುವುದಿಲ್ಲ ಎಂದು ವಿದೇಶಿಗರು ಆಶ್ಚರ್ಯಪಡಬಹುದು. ಆದರೆ ಇದು ಅಲ್ಲಿನ ಜನರಿಗೆ ಸಾಧ್ಯವಾಗುವುದೇ ತೀರಾ ವಿರಳ. ಉತ್ತರ ಕೊರಿಯಾದ ನಾಗರಿಕರಿಗೆ ದೇಶವನ್ನು ತೊರೆಯಲು ಅನುಮತಿಸಲಾಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ