ನ್ಯೂಯಾರ್ಕ್ : ಭಾರತದ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಮಣಿಯನ್ ಅವರನ್ನು ದಕ್ಷಿಣ ಸುಡಾನ್ನಲ್ಲಿರುವ ವಿಶ್ವಸಂಸ್ಥೆಯ ಮಿಷನ್ನ ಫೋರ್ಸ್ ಕಮಾಂಡರ್ (ಯುಎನ್ಎಂಐಎಸ್ಎಸ್) ಆಗಿ ನೇಮಕ ಮಾಡಲಾಗಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ತಿಳಿಸಿದ್ದಾರೆ. ಯುಎನ್ ಸೆಕ್ರೆಟರಿ ಜನರಲ್ ಅವರು ಭಾರತದ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಮಣಿಯನ್ ಅವರನ್ನು ದಕ್ಷಿಣ ಸುಡಾನ್ನಲ್ಲಿರುವ ವಿಶ್ವಸಂಸ್ಥೆಯ ಮಿಷನ್ನ ಹೊಸ ಫೋರ್ಸ್ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ ಎಂದು ಘೋಷಿಸಿದರು.
ಈ ಹಿಂದೆ ಯುಎನ್ಎಂಐಎಸ್ಎಸ್ ಫೋರ್ಸ್ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಶೈಲೇಶ್ ತಿನಾಯ್ಕರ್ ಅವರ ನಿರ್ಗಮನದ ಹಿನ್ನೆಲೆಯಲ್ಲಿ ಮೋಹನ್ ಸುಬ್ರಮಣಿ ಅವರನ್ನು ಆಯ್ಕೆ ಮಾಡಲಾಯಿತು.
ಲೆಫ್ಟಿನೆಂಟ್ ಜನರಲ್ ಸುಬ್ರಮಣಿಯನ್ ಅವರು ಕಳೆದ 36 ವರ್ಷಗಳಿಂದ ಭಾರತೀಯ ಸೇನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಇತ್ತೀಚೆಗೆ ಮಧ್ಯ ಭಾರತದಲ್ಲಿ ಸೇನಾ ವಲಯದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿದ್ದಾರೆ.