ಬರ್ಲಿನ್ : ಇಡೀ ವಿಶ್ವದಾದ್ಯಂತ ಆಹಾರದ ಕೊರತೆ ಎದುರಾಗುತ್ತಿದ್ದು, ಇದರಿಂದ ಜಗತ್ತು ಸಂಕಷ್ಟ ಎದುರಿಸಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರಸ್ ಎಚ್ಚರಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಜಗತ್ತು ಎದುರಿಸುತ್ತಿರುವ ಸಮಸ್ಯೆ, ಈಗ ಉಕ್ರೇನ್ ಯುದ್ಧದಿಂದಾಗಿ ಮತ್ತಷ್ಟು ತೀವ್ರಗೊಂಡಿದೆ. ಕೋವಿಡ್ ಪಿಡುಗು ಸಹ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ 10 ಕೋಟಿ ಜನರ ಮೇಲೆ ಅಹಾರ ಕೊರತೆಯ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
2022ರಲ್ಲಿ ಬಹುಕ್ಷಾಮಗಳು ಅಪ್ಪಳಿಸುವ ಸಾಧ್ಯತೆಗಳಿವೆ. ಈ ವರ್ಷದಲ್ಲಾಗಿರುವ ಆಹಾರ ಸಮಸ್ಯೆಯಿಂದಾಗಿ ಮುಂದಿನ ವರ್ಷದಲ್ಲೂ ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆಯಾಗಬಹುದು. ಸಾಮಾಜಿಕ, ಆರ್ಥಿಕತೆಯ ಮೇಲೂ ಇದರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.