ಅಫ್ಗಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್‌ ದಾಳಿ; ಇಬ್ಬರು ಪೊಲೀಸರ ಸಾವು

ಗುರುವಾರ, 10 ಮೇ 2018 (14:17 IST)
ಕಾಬೂಲ್ : ಅಫ್ಗಾನಿಸ್ತಾನದಲ್ಲಿ ಎರಡು ಪೊಲೀಸ್‌ ಠಾಣೆಗಳ ಮೇಲೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದೆ.

ದಾಳಿಕೋರರು ಮೊದಲು ಕಾಬೂಲ್‌ನ ಪಶ್ಚಿಮ ಭಾಗದಲ್ಲಿರುವ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದ್ದು ಈ ಘಟನೆಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಸ್ಫೋಟದ ನಂತರ ಗುಂಡಿನ ಚಕಮಕಿ ನಡೆದಿರುವ ಹಿನ್ನಲೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಾಬೂಲ್‌ನ ಮುಖ್ಯ ಪೊಲೀಸ್‌ ಅಧಿಕಾರಿ ದಾವುದ್‌ ಅಮಿನ್‌ ತಿಳಿಸಿದ್ದಾರೆ. ಹಾಗೇ ಈ ದಾಳಿಯ ಹೊಣೆಯನ್ನು ಐ.ಎಸ್‌ ಉಗ್ರ ಸಂಘಟನೆ ತೆಗೆದುಕೊಂಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ