ಫ್ಲೋರಿಡಾ: ಸತತ 9 ತಿಂಗಳಿನಿಂದ ಬಾಹ್ಯಾಕಾಶದಲ್ಲೇ ಇದ್ದ ಭಾರತೀಯ ಮೂಲದ ಅಮೆರಿಕಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇಂದು ಭೂಮಿಗೆ ಬಂದಿಳಿದಿದ್ದಾರೆ. ಬಾಹ್ಯಾಕಾಶದಲ್ಲಿದ್ದಾಗ ಅವರು ಏನು ಸೇವನೆ ಮಾಡುತ್ತಿದ್ದು, ಬ್ರೇಕ್ ಫಾಸ್ಟ್ ಏನಾಗಿತ್ತು ಇಲ್ಲಿದೆ ವಿವರ.
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಜೀವನ ಶೈಲಿ ನಮ್ಮಂತೆ ಖಂಡಿತಾ ಇರಲ್ಲ. ಭೂಮಿಯಂತೆ ಗುರುತ್ವಾಕರ್ಷಣ ಶಕ್ತಿಯೇ ಇಲ್ಲದ ಬಾಹ್ಯಾಕಾಶದಲ್ಲಿ ಬದುಕುವುದು ಅಷ್ಟು ಸುಲಭವಲ್ಲ. ಅದಕ್ಕೆ ದೈಹಿಕವಾಗಿ ಗಗನಯಾತ್ರಿಗಳು ಅಷ್ಟೇ ಸ್ಟ್ರಾಂಗ್ ಆಗಿರಬೇಕು.
ಸುನಿತಾ ವಿಲಿಯಮ್ಸ್ ಕೇವಲ ವಿಜ್ಞಾನಿ ಮಾತ್ರವಲ್ಲ, ಆಕೆ ಸ್ವಿಮ್ಮರ್ ಕೂಡಾ ಆಗಿದ್ದರು. ಇನ್ನು ವಿಲ್ಮೋರ್ ಗೆ ಈಗ 62 ವರ್ಷ. ತಮ್ಮ ಯೌವನದಲ್ಲಿ ಅವರೂ ಫುಟ್ಬಾಲ್ ಪ್ಲೇಯರ್ ಆಗಿದ್ದರು. ದೈಹಿಕವಾಗಿ ಇಬ್ಬರೂ ಸದೃಢರಾಗಿರುವುದರಿಂದಲೇ ಬಾಹ್ಯಾಕಾಶದಲ್ಲಿ ಇಷ್ಟು ದಿನ ಉಳಿಯಲು ಸಾಧ್ಯವಾಯಿತು.
ಇನ್ನು, ವಿಲ್ಮೋರ್ ಗೆ ಓರ್ವ ಮಗಳೂ ಇದ್ದಾಳೆ. ಸುನಿತಾ ಬಾಹ್ಯಾಕಾಶದಿಂದಲೇ ಇಂಟರ್ನೆಟ್ ಕಾಲ್ ಮೂಲಕ ಗಂಡ, ಪೋಷಕರನ್ನು ಆಗಾಗ ಸಂಪರ್ಕಿಸುತ್ತಿದ್ದರು. ಬಾಹ್ಯಾಕಾಶದಲ್ಲಿ ಇವರ ಆರೋಗ್ಯ, ಕ್ಯಾಲೊರಿ ಸೇವನೆ ಪ್ರಮಾಣ ಪರೀಕ್ಷಿಸಲು ತಜ್ಞರಿದ್ದರು.
ಬ್ರೇಕ್ ಫಾಸ್ಟ್ ಗೆ ಏನು?
ನಮ್ಮಂತೆ ಬೇಕು ಬೇಕಾಗಿದ್ದನ್ನೆಲ್ಲಾ ತಿನ್ನಲು ಗಗನಯಾತ್ರಿಗಳಿಗೆ ಅವಕಾಶವೂ ಇಲ್ಲ, ಕೈಗೂ ಸಿಗಲ್ಲ. ಹಾಗಿದ್ದರೂ ಸುನಿತಾ ಮತ್ತು ವಿಲ್ಮೋರ್ ಪಿಜ್ಜಾ, ರೋಸ್ಟ್ ಚಿಕನ್, ಕಾಕ್ ಟೇಲ್, ಸೆರೆಲ್ಸ್, ಪೌಡರ್ ಮಿಲ್ಕ್ ಬಳಸುತ್ತಿದ್ದ ಫೋಟೋವನ್ನು ಸ್ವತಃ ನಾಸಾ ಕಳೆದ ವರ್ಷ ನವಂಬರ್ ನಲ್ಲಿ ಬಿಡುಗಡೆ ಮಾಡಿತ್ತು. ನಾಸಾ ಮೆಡಿಕಲ್ ಟೀಂ ಅವರ ಕ್ಯಾಲೊರಿ ತೆಗೆದುಕೊಳ್ಳುವ ಪ್ರಮಾಣದ ಮೇಲೆ ನಿಗಾ ಇಟ್ಟಿತ್ತು. ಮೊದಲು ಫ್ರೆಶ್ ಹಣ್ಣು, ತರಕಾರಿ ಲಭ್ಯವಿತ್ತು. ಆದರೆ ಮೂರು ತಿಂಗಳ ಬಳಿಕ ಅವೆಲ್ಲಾ ಖಾಲಿಯಾಗಿತ್ತು.
ನೀರಿನ ಮೂಲ ಕೇಳಿದ್ರೆ ಶಾಕ್ ಆಗ್ತೀರಿ
ಇನ್ನು, ತಿಂಡಿ ವಿಚಾರ ಹಾಗಿದ್ದರೆ ನೀರಿನ ವಿಚಾರ ಕೇಳಿದ್ರೆ ಶಾಕ್ ಆಗ್ತೀರಿ. ಗಗನಯಾತ್ರಿಗಳ ಮೂತ್ರ ಮತ್ತು ಬೆವರನ್ನೇ ಬಾಹ್ಯಾಕಾಶ ಕೇಂದ್ರದಲ್ಲಿ ಸಂಸ್ಕರಿಸಿ ಕುಡಿಯುವ ನೀರಾಗಿ ಬಳಕೆ ಮಾಡಲಾಗುತ್ತದೆ. ಬಾಹ್ಯಾಕಾಶ ಕೇಂದ್ರದಲ್ಲಿ ಆಹಾರಕ್ಕೆ ಕೊರತೆಯಿಲ್ಲ. ಪ್ರತೀ ಗಗನಯಾತ್ರಿಗೆ ಪ್ರತಿ ದಿನಕ್ಕೆ 3.8 ಪೌಂಡ್ಸ್ ನಷ್ಟು ಆಹಾರ ಲಭ್ಯವಿರುತ್ತದೆ. ಆದರೆ ಅಲ್ಲಿನ ವಾತಾವರಣದಿಂದಾಗಿ ಗಗನಯಾತ್ರಿಗಳು ತೂಕ ಕಳೆದುಕೊಳ್ಳುತ್ತಾರೆ. ಭೂಮಿಗೆ ಬಂದ ಮೇಲೆ ಕಣ್ಣಿನ ದೃಷ್ಟಿ ಮಂದವಾಗುತ್ತದೆ, ಕಿವಿ ಮಂದವಾಗುತ್ತದೆ, ಮೂಳೆಗಳು ದುರ್ಬಲವಾಗಿರುತ್ತದೆ ಮತ್ತು ಕಿಡ್ನಿ ಸ್ಟೋನ್ ನಂತಹ ಸಮಸ್ಯೆಯೂ ಬರುತ್ತದೆ.