Sunita Williams: ಭೂಮಿಗೆ ಬಂದ ಸುನಿತಾ ವಿಲಿಯಮ್ಸ್ ಆರೋಗ್ಯ ಯಾವ ಸ್ಥಿತಿ ತಲುಪಿರುತ್ತದೆ ಗೊತ್ತಾ

Krishnaveni K

ಬುಧವಾರ, 19 ಮಾರ್ಚ್ 2025 (09:57 IST)
ಫ್ಲೋರಿಡಾ: ಭಾರತೀಯ ಮೂಲದ ಅಮೆರಿಕಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ 9 ತಿಂಗಳ ಬಾಹ್ಯಾಕಾಶ ಯಾತ್ರೆ ಬಳಿಕ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ.

ಭೂಮಿಗೆ ಬಂದರೂ ಅವರ ಆರೋಗ್ಯ ಸ್ಥಿತಿ ಯಾವ ಹಂತಕ್ಕೆ ತಲುಪಿರುತ್ತದೆ ಎಂದು ಈಗಲೇ ಹೇಳಲಾಗದು. ಬಾಹ್ಯಾಕಾಶದಲ್ಲಿ ಇಷ್ಟು ದಿನ ಕಳೆದ ಅವರು ಈಗ ಇದ್ದಕ್ಕಿದ್ದಂತೆ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಅವರನ್ನು ಐಸೋಲೇಟ್ ಮಾಡಿ ಇರಿಸಲಾಗುತ್ತದೆ. ವೈದ್ಯರು ಪ್ರಮಾಣೀಕರಿಸುವವರೆಗೂ ಅವರು ನಾರ್ಮಲ್ ಜೀವನಕ್ಕೆ ಮರಳಲು ಸಾಧ್ಯವಾಗುವುದಿಲ್ಲ.

ಭೂಮಿಗೆ ಬಂದ ಗಗನಯಾತ್ರಿಗಳ ಎಲುಬು ಮೃದುವಾಗಿ ಹತ್ತಿಯಂತಾಗಿರುತ್ತದೆ. ಮೂಳೆ ಸವೆತ, ಬೇಬಿ ಫೀಟ್ ಸಮಸ್ಯೆಗೊಳಗಾಗುತ್ತಾರೆ. ಇದರಿಂದ ಅವರಿಗೆ ನಡೆದಾಡಲೂ ಕಷ್ಟವಾಗುತ್ತದೆ. ಕ್ಯಾನ್ಸರ್ ಉಂಟುಮಾಡುವ ಕೋಶಗಳು ಅವರ ದೇಹದಲ್ಲಿ ಬೆಳೆದಿರುವ ಸಾಧ್ಯತೆಯಿರುತ್ತದೆ.

ಇನ್ನು, ತಲೆನೋವು, ವಾಕರಿಕೆ ಮುಂತಾದ ಸಮಸ್ಯೆಯಿರುತ್ತದೆ. ಅಲ್ಲದೆ ತಮ್ಮ ದೇಹದ ಮೇಲೆ ಅವರಿಗೇ ನಿಯಂತ್ರಣವಿರುವುದಿಲ್ಲ. ಹೀಗಾಗಿ ಕೆಲವು ದಿನಗಳವರೆಗೆ ಸುನಿತಾ ಯಾರ ಕಣ್ಣಿಗೂ ಕಾಣಿಸಿಕೊಳ್ಳಲ್ಲ. ಅಷ್ಟೇ ಅಲ್ಲ, ಭೂಮಿಗೆ ಬಂದ ತಕ್ಷಣವೇ ಅವರು ಸೇಫ್ ಎಂದೂ ಹೇಳಲಾಗದು. ವೈದ್ಯರು ಪ್ರಮಾಣೀಕರಿಸುವವರೆಗೂ ಆತಂಕ ಇದ್ದೇ ಇರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ