ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಸಂಘಟನೆಯ ಉಗ್ರರು ರಾಜಧಾನಿ ಕಾಬೂಲ್ ಪ್ರವೇಶಿಸಿದ್ದು, ಆಫ್ಘಾನಿಸ್ತಾನ
ಸರಕಾರ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡಲು ನಿರ್ಧರಿಸಿದೆ.
ತಾಲಿಬಾನ್ ಸಂಘಟನೆಯ ಉಗ್ರರು ಜಲಾಲಬಾದ್ ವಶಪಡಿಸಿಕೊಂಡ ಬೆನ್ನಲ್ಲೇ ಕಾಬೂಲ್ ನತ್ತ ಭಾನುವಾರ ಮಧ್ಯಾಹ್ನ ಪ್ರವೇಶಿಸಿತು.
ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ ನಡುವೆಯೂ ತಾಲಿಬಾನ್ ಸಂಘಟನೆ ಆಫ್ಘಾನಿಸ್ತಾನ ಸೇನೆಯ ಮೇಲೆ ಪ್ರಾಬಲ್ಯ ಮುಂದುವರಿಸಿದ್ದು, ಶೀಘ್ರದಲ್ಲೇ ಕಾಬೂಲ್ ಅನ್ನು ಕೂಡ ವಶಪಡಿಸಿಕೊಳ್ಳುವ ಮೂಲಕ ಸಂಪೂರ್ಣ ಆಫ್ಘಾನಿಸ್ತಾನ ಹಿಡಿತಕ್ಕೆ ತೆಗೆದುಕೊಳ್ಳಲು ಮುನ್ನುಗ್ಗುತ್ತಿದೆ.