ಮೊಟ್ಟ ಮೊದಲ ಬಾರಿಗೆ ಅಮೆರಿಕ ಅಧಿಕಾರಿಯೊಂದಿಗೆ ತಾಲಿಬಾನ್‌ ಮಾತುಕತೆ

ಭಾನುವಾರ, 29 ಜುಲೈ 2018 (11:55 IST)
ಇಸ್ಲಾಮಾಬಾದ್ : ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಇದೇ ಮೊದಲ ಬಾರಿಗೆ ಅಮೆರಿಕ ಅಧಿಕಾರಿಯೊಂದಿಗೆ ತಾಲಿಬಾನ್‌ ಮಾತುಕತೆ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.


ಈ ವಿಚಾರವನನ್ನು ಹಿರಿಯ ತಾಲಿಬಾನ್ ನಾಯಕನೊಬ್ಬ ಅಸೋಸಿಯೇಟಡ್ ಪ್ರೆಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ. ದಕ್ಷಿಣ ಏಷ್ಯಾ ವ್ಯವಹಾರಗಳ ಪ್ರಮುಖ ಅಧಿಕಾರಿ ಅಲೈಸ್‌ ವೆಲ್ಸ್‌ ಜೊತೆಗೆ ತಾಲಿಬಾನ್‌ ಅಧಿಕಾರಿಗಳು ಕತಾರ್‌ನಲ್ಲಿರುವ ರಾಜಕೀಯ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆದಿದೆ ಎಂದು ಆತ ಹೇಳಿದ್ದಾನೆ.


ಆದರೆ ಅಮೆರಿಕ ಅಲ್ಲಿನ ಆಡಳಿತಾರೂಢ ಕುಟುಂಬದೊಂದಿಗೆ ಮಾತುಕತೆ ನಡೆದಿದೆ ಎಂದಷ್ಟೇ ಹೇಳಿದೆ ಹೊರತು ಈ ಬಗ್ಗೆ ಯಾವುದೇ ವಿವರ ನೀಡಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ