ಕಚೇರಿಯ ಕೆಲಸಕ್ಕೆ ಸೈಕಲ್ ನಲ್ಲಿ ಬಂದ್ರೆ ಈ ದೇಶದಲ್ಲಿ ನೀಡ್ತಾರೆ ಬಂಪರ್ ಆಫರ್

ಶುಕ್ರವಾರ, 15 ಮಾರ್ಚ್ 2019 (07:02 IST)
ನೆದರ್ ಲ್ಯಾಂಡ್ : ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ನೆದರ್ಲ್ಯಾಂಡ್ ದೇಶದಲ್ಲಿ ಜನರಿಗೆ ಬಂಪರ್ ಆಫರ್ ವೊಂದನ್ನು ಘೋಷಣೆ ಮಾಡಿದೆ.


ಇತ್ತೀಚಿನ ದಿನಗಳಲ್ಲಿ ವಾಹನಗಳಿಂದ ವಾಯುಮಾಲಿನ್ಯ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಈ ವಾಯುಮಾಲಿನ್ಯವನ್ನು ತಡೆಗಟ್ಟಲು ಸೈಕಲ್ ಬಳಕೆ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ನೆದರ್ಲ್ಯಾಂಡ್ ಸರ್ಕಾರವು ಸೈಕಲ್ ಸವಾರರಿಗೆ ಹಣ ನೀಡ್ತಿದೆ.


ಇಲ್ಲಿನ ಜನರು ಸೈಕಲ್ ಮೂಲಕ ಕಚೇರಿಗೆ ಹೋದ್ರೆ ಅಂಥವರಿಗೆ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿಯಂತೆ ಸರ್ಕಾರ  ಹಣ ನೀಡುತ್ತದೆ. ಈ ಉದ್ಯೋಗಿಗಳಿಗೆ ಅವರು  ಕೆಲಸ ಮಾಡುವ ಕಚೇರಿ ವತಿಯಿಂದ ತೆರಿಗೆಯಲ್ಲಿ ವಿನಾಯತಿ ಸಿಗಲಿದೆಯಂತೆ. ಈ ಸೌಲಭ್ಯ ಉದ್ಯೋಗಿಗಳಿಗೆ ಮಾತ್ರ ಮೀಸಲಾಗಿದ್ದು, ಕಚೇರಿಗೆ ಸೈಕಲ್ ಮೇಲೆ ಹೋದ್ರೆ ಮಾತ್ರ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿ ಸಿಗಲಿದೆ. ವೈಯಕ್ತಿಕ ಕೆಲಸಕ್ಕೆ ಹೋದ್ರೆ ಹಣ ಸಿಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ