ರಾಜ್ಯ ಸರಕಾರದ ವಿರುದ್ಧ ರೇಷ್ಮೆ ಬೆಳೆಗಾರರ ಪ್ರತಿಭಟನೆ
ಸೋಮವಾರ, 16 ಜುಲೈ 2018 (17:12 IST)
ರೇಷ್ಮೆ ಗೂಡಿನ ದರ ಕಡಿಮೆಯಾಗಿದ್ದಕ್ಕೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರೇಷ್ಮೆ ಬೆಳೆಗಾರರು ಪ್ರತಿಭಟನೆ ಹಾದಿ ತುಳಿದಿದ್ದಾರೆ.
ಉತ್ತರ ಕರ್ನಾಟಕದ ರೇಷ್ಮೆ ಬೆಳೆಗಾರರಿಗೆ ಇಪ್ಪತ್ತೈದು ವರ್ಷದಿಂದ ಅರವತ್ತು ರೂಪಾಯಿಯಂತೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಆದರೆ ಅದನ್ನು ಈಗ ಹತ್ತು ರೂಪಾಯಿಯಂತೆ ಬಹಳ ಕನಿಷ್ಟ ಬೆಲೆಗೆ ಇಳಿಕೆ ಮಾಡಿದ್ದಾರೆ. ಇದರಿಂದ ಯಾವುದೇ ಸೌಲಭ್ಯವಿಲ್ಲದ ರೇಷ್ಮೆ ಬೆಳೆಗಾರರು ತುಂಬಾ ಸಂಕಷ್ಟಕ್ಕೀಡಾಗುತ್ತಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದ್ರು. ಅಲ್ಲದೇ ರೇಷ್ಮೆ ಬೆಳೆಹಾನಿ ಮುಂದುವರಿಕೆ, ಸಂಕಷ್ಟ ಪರಿಹಾರ ನಿಧಿ, ಆವರ್ತನ ನಿಧಿ ಸ್ಥಾಪನೆ, ಮಧ್ಯಂತರ ಪರಿಹಾರ ಪೋಷಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಳೆಗಾರರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ರು.
ಗದಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಭಾರತೀಯ ಕಿಸಾನ್ ಸಂಘ ಸಹ ಸಾಥ್ ನೀಡಿತ್ತು.