ಚೀನಾದ ಅಧ್ಯಕ್ಷರಿಗಿಂತ ಪ್ರಧಾನಿ ನರೇಂದ್ರ ಮೋದಿ ಭಾರೀ ಜನಪ್ರಿಯರಾಗಿದ್ದಾರೆ. ಅಷ್ಟೇ ಅಲ್ಲ, ಚೀನಿಯರು ಕೂಡ ಮೋದಿ ನಡೆಗೆ ಜೈ ಎನ್ನುತ್ತಿದ್ದಾರೆ.
ಚೀನಾ ಸರ್ಕಾರದ ಮುಖವಾಣಿಯಾಗಿರುವ ಗ್ಲೋಬಲ್ ಟೈಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಚೀನೀಯರು ತಮ್ಮ ದೇಶದ ನಾಯಕರಿಗಿಂತ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಬಗ್ಗೆ ಹೆಚ್ಚು ಸಂತೋಷಪಟ್ಟಿದ್ದಾರೆ.
ಸಮೀಕ್ಷೆಯ ಪ್ರಕಾರ, ಸುಮಾರು 50 ರಷ್ಟು ಚೀನೀಯರು ಭಾರತದಲ್ಲಿ ಪ್ರಧಾನಿ ಮೋದಿಯವರ ಸರ್ಕಾರವನ್ನು ಶ್ಲಾಘಿಸಿದರೆ ಶೇಕಡಾ 50 ರಷ್ಟು ಜನರು ಬೀಜಿಂಗ್ ಪರವಾಗಿದ್ದಾರೆ.
ಭಾರತದಲ್ಲಿ ಚೀನಾ ವಿರೋಧಿ ಭಾವನೆ ಹೆಚ್ಚಾಗಿದೆ ಎಂದು ಸುಮಾರು 70% ಚೀನಿಯರು ನಂಬಿದ್ದಾರೆ ಎಂದು ಸಮೀಕ್ಷೆಯು ತೋರಿಸಿದೆ.
ಸುಮಾರು 30% ರಷ್ಟು ಜನರು ಬೀಜಿಂಗ್ ಮತ್ತು ನವದೆಹಲಿ ನಡುವಿನ ಸಂಬಂಧವು ಭವಿಷ್ಯದಲ್ಲಿ ಸುಧಾರಿಸುತ್ತದೆ ಎಂದಿದ್ದಾರೆ.