ಫಿನ್ಲ್ಯಾಂಡ್ ನಲ್ಲಿ ಮಕ್ಕಳನ್ನು ಪಡೆದ ದಂಪತಿಗೆ ಸರ್ಕಾರದಿಂದ ಸಿಗಲಿದೆ ಬಂಪರ್ ಆಫರ್

ಬುಧವಾರ, 27 ಫೆಬ್ರವರಿ 2019 (06:33 IST)
ಫಿನ್ಲ್ಯಾಂಡ್ : ಭಾರತದಲ್ಲಿ ಜಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನಸಂಖ್ಯಾ ನಿಯಂತ್ರಣ ಮಾಡಲು ಸರ್ಕಾರ ಹರಸಾಹಸ ಮಾಡುತ್ತಿದೆ. ಆದರೆ  ಫಿನ್ಲ್ಯಾಂಡ್ ಸರ್ಕಾರ ಜನಸಂಖ್ಯಯನ್ನು ಹೆಚ್ಚಿಸಲು ಜನರಿಗೆ ಬಂಪರ್ ಆಫರ್ ವೊಂದನ್ನು ನೀಡಿದೆ.


ಹೌದು. ಜನರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಫಿನ್ಲ್ಯಾಂಡ್ ನಲ್ಲಿ ಜನಸಂಖ್ಯೆ ಕಡಿಮೆಯಿದೆ. ಆದ್ದರಿಂದ ಅಲ್ಲಿನ ಸರ್ಕಾರ ಜನಸಂಖ್ಯೆ ಹೆಚ್ಚಿಸಲು ಮಕ್ಕಳನ್ನು ಪಡೆದ ದಂಪತಿಗೆ ಬೇಬಿ ಬೋನಸ್ ಹೆಸರಿನಲ್ಲಿ ಹಣದ ಜೊತೆಗೆ  ಶಿಶುಗಳ ಆರೈಕೆಗೆ ಕಿಟ್ ಹಾಗೂ 17 ವರ್ಷದೊಳಗಿನ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತಿದೆ.


ಒಂದು ಮಗುವಿಗೆ ದಂಪತಿ 10,000 ಯುರೋ ( ಸುಮಾರು 7 ಲಕ್ಷ ರೂ.)ವನ್ನು ಸರ್ಕಾರದಿಂದ ಪಡೆಯುತ್ತಿದ್ದಾರೆ. ಹಣ ಸಹಾಯ ಜನಸಂಖ್ಯೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಸರ್ಕಾರ  ಈ ಯೋಜನೆಯನ್ನು ಹಮ್ಮಿಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ