ಸಂಗೀತ ವಾದ್ಯ ನುಡಿಸುವ ವ್ಯಕ್ತಿ ಧಾರ್ಮಿಕವಾಗಿ ಅಯೋಗ್ಯ ಎಂದ ಕೋರ್ಟ್

ಗುರುವಾರ, 4 ಅಕ್ಟೋಬರ್ 2018 (08:22 IST)
ಸೌದಿ ಅರೇಬಿಯಾ : ಸಂಗೀತ ವಾದ್ಯ ನುಡಿಸುವ ವ್ಯಕ್ತಿ ಧಾರ್ಮಿಕವಾಗಿ ಅಯೋಗ್ಯ ಎಂದು ಇಲ್ಲಿನ ಕೋರ್ಟ್ ಒಂದು ತೀರ್ಪು ನೀಡಿದೆ.


ಶಿಕ್ಷಕನಾಗಿದ್ದ ಯುವಕನೊಬ್ಬ ಬ್ಯಾಂಕ್ ಮ್ಯಾನೇಜರ್ ಆಗಿರುವ 38ರ ಹರೆಯದ ಯುವತಿಯ ಕೈಹಿಡಿಯಲು ಬಯಸಿದ್ದ. ಆದರೆ ಆ ಯುವಕ ಅರಬ್ ದೇಶಗಳಲ್ಲಿ ಜನಪ್ರಿಯವಾಗಿರುವ ಗಿಟಾರ್ ರೀತಿಯ ಊಡ್ ವಾದಕನೂ ಆಗಿದ್ದ ಕಾರಣಕ್ಕೆ ಯುವತಿಯ ಮನೆಯವರು ಮದುವೆಗೆ ಒಪ್ಪಲಿಲ್ಲ.


ಇದನ್ನ ಪ್ರಶ್ನಿಸಿ ಯುವಕ ಕೋರ್ಟ್ ಮೆಟ್ಟಿಲೇರಿದ್ದ. ಆದರೆ ಸೌದಿಯಲ್ಲಿ ಮಹಿಳೆಯರು ಪ್ರಯಾಣಿಸಲು, ಮದುವೆಯಾಗಲು ಹಾಗೂ ಇತರೆ ಕಾರ್ಯಗಳಿಗಾಗಿ ಪುರುಷ ರಕ್ಷಕರಾದ ತಂದೆ, ಗಂಡ ಅಥವಾ ಇತರೆ ಪುರುಷ ಸಂಬಂಧಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಹಾಗೂ ಸಂಗೀತ ವಾದ್ಯ ನುಡಿಸುವವನ ಅಂತಸ್ತು ಕಡಿಮೆ ಎಂಬುದಾಗಿ ಅಲ್ಲಿ ಪರಿಗಣಿಸಲಾಗುತ್ತದೆ ಮತ್ತು  ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ.


ಆದಕಾರಣ ಕೆಳಹಂತದ ನ್ಯಾಯಾಲಯ ಕುಟುಂಬದ ಪರವಾಗಿ ತೀರ್ಪು ನೀಡಿದ್ದು, ಸಂಗೀತ ವಾದ್ಯ ನುಡಿಸುವ ವ್ಯಕ್ತಿ ಧಾರ್ಮಿಕವಾಗಿ ಅಯೋಗ್ಯ, ಧಾರ್ಮಿಕ ದೃಷ್ಟಿಕೋನದಿಂದ ಯುವಕ ಮಹಿಳೆಗೆ ಸೂಕ್ತವಲ್ಲ ಎಂದು ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ