ಸ್ಫೋಟಕ್ಕೆ 6 ಮಂದಿ ಸಾವು, 23 ಜನರಿಗೆ ಗಾಯ!

ಶುಕ್ರವಾರ, 28 ಜುಲೈ 2023 (07:33 IST)
ಡೆಮಾಸ್ಕಸ್ : ಸಿರಿಯಾದಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿ ಆರು ಜನರು ಸಾವಿಗೀಡಾಗಿದ್ದು, 23 ಮಂದಿ ಗಾಯಗೊಂಡಿದ್ದಾರೆ.

ಡೆಮಾಸ್ಕಸ್ ಗ್ರಾಮಾಂತರದಲ್ಲಿರುವ ಅಸ್ಸಾಯಿದಾ ಜೈನಾಬ್ ಪಟ್ಟಣವನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದು ಸಿರಿಯನ್ ಅರಬ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. 

ಸಯ್ಯಿದಾ ಜೈನಾಬ್ನ ಕೌ ಸುಡಾನ್ ಸ್ಟ್ರೀಟ್ನಲ್ಲಿ ಟ್ಯಾಕ್ಸಿ ಬಳಿ ಮೋಟಾರ್ಸೈಕಲ್ ಅನ್ನು ಸ್ಫೋಟಿಸಲಾಯಿತು. ಘಟನೆಯಲ್ಲಿ ಮೃತಪಟ್ಟವರ ದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ. 23 ಮಂದಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ