ಕೀವ್ : ಉಕ್ರೇನ್ ಹೃದಯ ಚೂರುಚೂರಾಗಿದ್ದು ನೀಪರ್ ನದಿಗೆ ಅಡ್ಡಲಾಗಿ ನಿರ್ಮಿಸಿದ ನೋವಾ ಕಖೋವ್ಕಾ ಜಲಾಶಯವನ್ನು ಸ್ಫೋಟಿಸಲಾಗಿದೆ.
ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ನೀರಿನ ಪ್ರವಾಹ ಉಂಟಾಗಿದ್ದು, ತಗ್ಗುಪ್ರದೇಶದ ಜನ ಎದ್ನೋ ಬಿದ್ನೋ ಎಂದು ಓಡಿ ಪ್ರಾಣ ಉಳಿಸಿಕೊಂಡಿದ್ದು ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಖೇರ್ಸಾನ್ಗೆ 30 ಕಿಲೋಮೀಟರ್ ದೂರದಲ್ಲಿರುವ ಈ ಡ್ಯಾಂ ಉಕ್ರೇನ್ ಪಾಲಿಗೆ ಜೀವನಾಡಿಯಾಗಿತ್ತು.
ಈ ಡ್ಯಾಂ ಸಮೀಪ ಕಳೆದ ಕೆಲ ದಿನಗಳಿಂದ ಭಾರೀ ದಾಳಿಗಳು ನಡೆಯುತ್ತಿದ್ದವು. ಇದು ರಷ್ಯಾ ಕೆಲಸ ಎಂದು ಉಕ್ರೇನ್ ಆರೋಪಿಸುತ್ತಿದೆ. ಆದರೆ ರಷ್ಯಾ ಇದು ನಮ್ಮ ಕೆಲಸವಲ್ಲ. ಇದು ಭಯೋತ್ಪಾದಕ ದಾಳಿ ಎಂದು ತಿರುಗೇಟು ನೀಡಿದೆ.