ಕೊರೊನಾಗೆ ಬಾಯ್ ಬಾಯ್ ಹೇಳಿದ ರಾಷ್ಟ್ರಗಳಿವು!

ಭಾನುವಾರ, 25 ಜುಲೈ 2021 (09:06 IST)
ಲಸಿಕೆ ಪಡೆದವರು ಮಾಸ್ಕ್ಗಳ ಬಳಸುವಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕೇ,  ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಕೆಲವು ದೇಶಗಳು ವ್ಯಾಕ್ಸಿನೇಶನ್  ಹಿನ್ನೆಲೆ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿವೆ.

ಚೀನಾ, ಭೂತಾನ್, ಸ್ವೀಡನ್, ಹಂಗೇರಿ ಹಾಗೂ ನ್ಯೂಜಿಲ್ಯಾಂಡ್ ದೇಶಗಳು ತಮ್ಮ ಜನರಿಗೆ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಹೇಳಿದೆ. ಇನ್ನು ಇಸ್ರೇಲ್ ಕೂಡ ಇದೇ ಘೋಷಣೆಯನ್ನು ಮಾಡಿದ್ದರೂ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾದ ನಂತರ ನಿಯಮವನ್ನು ಹಿಂದಕ್ಕೆ ತೆಗೆದುಕೊಂಡಿದೆ. ಯರೋಪ್ ಹಾಗೂ ಯುಎಸ್, ಇಂಡೋನೇಷ್ಯಾ ಹಾಗೂ ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವಂತೆಯೇ ಕೆಲವೊಂದು ದೇಶಗಳು ಮಾಸ್ಕ್ ಧರಿಸದೇ ಇರಲು ಜನರಿಗೆ ಸೂಚನೆ ನೀಡಿವೆ.
ಯುಎಸ್ನಲ್ಲಿ ಡೆಲ್ಟಾ ರೂಪಾಂತರವು ತೀವ್ರ ಏರಿಕೆಯಾದ ಹಿನ್ನಲೆಯಲ್ಲಿಯೇ ಪೂರ್ಣ ಲಸಿಕೆ ಪಡೆದವರು ಮಾಸ್ಕ್ಗಳ ಬಳಸುವಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕೇ,  ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಕೆಲವು ದೇಶಗಳು ವ್ಯಾಕ್ಸಿನೇಶನ್  ಹಿನ್ನೆಲೆ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿವೆ. ಇನ್ನು ಕೆಲವು ದೇಶಗಳು ಸಡಿಲಿಕೆಯನ್ನು ಮತ್ತೊಮ್ಮೆ ಬಲಪಡಿಸಿವೆ. ಹಾಗಾದರೆ ನೊ ಮಾಸ್ಕ್ ನಿಯಮಕ್ಕೆ ಚಾಲನೆ ಕೊಟ್ಟ ದೇಶಗಳು ಯಾವುವು ಎಂಬುದನ್ನು ನೋಡೋಣ.
ಇಂಗ್ಲೆಂಡ್
ಇಂಗ್ಲೆಂಡ್ನಲ್ಲಿರುವ ಜನರಿಗೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲದೇ ಇದ್ದರೂ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸುವಂತೆ ಹೇಳಲಾಗಿದೆ. ಸ್ಕಾಟ್ಲ್ಯಾಂಡ್ನಲ್ಲಿ ಶಾಪ್ಗಳು ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಸ್ವೀಡನ್
ಸ್ವೀಡನ್ ಸಂಪೂರ್ಣವಾಗಿ ಲಾಕ್ಡೌನ್ ವಿಧಿಸಿಲ್ಲದೇ ಇದ್ದರೂ ಕೆಲವೊಂದು ನಿರ್ಬಂಧಗಳನ್ನು ಜುಲೈ 1 ರಂದು ಕೊನೆಗೊಳಿಸಿದೆ. ಹೆಚ್ಚಿನ ದೇಶಗಳಿಗಿಂತ ಭಿನ್ನವಾಗಿ, ಸ್ವೀಡನ್ ಮುಖ್ಯವಾಗಿ ಕೋವಿಡ್ -19 ರ ಹರಡುವಿಕೆಯನ್ನು ತಡೆಯಲು ಸ್ವಯಂಪ್ರೇರಿತ ಕ್ರಮಗಳನ್ನು ಅವಲಂಬಿಸಿದೆ, ಆದರೂ ರೆಸ್ಟೋರೆಂಟ್ಗಳಿಗೆ ತೆರೆಯುವ ಸಮಯವನ್ನು ನಿರ್ಬಂಧಿಸುವುದು ಮತ್ತು ಸ್ಥಳಗಳಲ್ಲಿ ಜನಸಂದಣಿಯ ಮಿತಿಗಳನ್ನು ಸಹ ಜಾರಿಗೆ ತರಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಅಮೆರಿಕಾ
ಸಣ್ಣ ಸಮಾರಂಭಗಳಲ್ಲಿ ಮಾಸ್ಕ್ ಕಡ್ಡಾಯವೆಲ್ಲವೆಂದು ದೊಡ್ಡಣ್ಣ ಹೇಳಿದೆ. ಲಸಿಕೆ ಹಾಕಿದವರಿಗೂ ಕಡ್ಡಾಯ ಮಾಸ್ಕ್ ನಿಯಮವನ್ನು ದೇಶ ತೆಗೆದುಹಾಕಿದೆ.
ಚೀನಾ
ಸಾಂಕ್ರಾಮಿಕ ಆರಂಭವಾದ ಚೀನಾ ದೇಶದಲ್ಲಿ ಮಾಸ್ಕ್ ಕಡ್ಡಾಯವಿಲ್ಲ. ಆರಂಭದ ದಿನಗಳಲ್ಲಿ ಚೀನಾದ ಮೇಲೆ ಕೋವಿಡ್ ಕರಿನೆರಳು ಕೆಟ್ಟದಾಗಿ ಹಬ್ಬಿತ್ತು. ಆದರೆ ಕಠಿಣ ಲಾಕ್ಡೌನ್ ನಿಯಮಗಳಿಂದ ಸರಕಾರ ಕೋವಿಡ್ ಅನ್ನು ನಿಯಂತ್ರಣಕೆ ತಂದಿತು.
ನ್ಯೂಜಿಲ್ಯಾಂಡ್
ಸಾಂಕ್ರಾಮಿಕದ ಸಮಯದಲ್ಲಿ ದೇಶವನ್ನು ಕೊರೋನಾಮುಕ್ತಗೊಳಿಸುವಲ್ಲಿ ಪ್ರಧಾನಿ ಜೆಸಿಂಡಾ ಆರ್ಡರ್ನ್ಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ದೇಶದಲ್ಲಿ ದಾಖಲಾದ ಕೋವಿಡ್ – 19 ಪ್ರಕರಣಗಳು 2,658 ಮತ್ತು ಮರಣ ಸಂಖ್ಯೆ 26 ಆಗಿತ್ತು.
ಹಂಗೇರಿ
ಆಸ್ಪತ್ರೆಗಳನ್ನು ಹೊರತು ಪಡಿಸಿ ಇಲ್ಲಿನ ನಿವಾಸಿಗಳಿಗೆ ಮಾಸ್ಕ್ ಕಡ್ಡಾಯವಾಗಿರಲಿಲ್ಲ. 5 ಮಿಲಿಯನ್ ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಿದ ನಂತರ ಈ ದೇಶ ಮಾಸ್ಕ್ ಕಡ್ಡಾಯವಲ್ಲ ಎಂಬ ನಿಯಮವನ್ನು ಜಾರಿಗೆ ತಂದಿದೆ.
ಇಟಲಿ
ಜೂನ್ನಲ್ಲಿಯೇ ಕೊರೋನಾ ಮುಕ್ತ ದೇಶ ಎಂಬ ಹೆಗ್ಗಳಿಕೆಗೆ ಇಟಲಿ ಪಾತ್ರವಾಗಿದೆ. ಮಾಸ್ಕ್ ಧರಿಸುವಿಕೆಯನ್ನು ಈ ದೇಶ ಕಡ್ಡಾಯಗೊಳಿಸಿಲ್ಲ.
ಇಸ್ರೇಲ್
ಇಸ್ರೇಲ್ ದೇಶ ಮಾಸ್ಕ್ ಕಡ್ಡಾಯವಲ್ಲ ಎಂಬ ನಿಯಮವನ್ನು ಜಾರಿಗೆ ತಂದಿದ್ದರೂ, ಕೋರೋನಾ ಕೇಸ್ಗಳಲ್ಲಿ ಏರಿಕೆಯಾದ ನಂತರ ಮಾಸ್ಕ್ ಕಡ್ಡಾಯ ಮಾಡಿದೆ.
ನಿಯಮಗಳನ್ನು ಕಟ್ಟುನಿಟ್ಟು ಮಾಡಿದ ಆಸ್ಟ್ರೇಲಿಯಾ
2020 ರಲ್ಲಿ ಆಸ್ಟ್ರೇಲಿಯನ್ನರು ಕಡಿಮೆ ಕೋವಿಡ್ ನಿರ್ಬಂಧಗಳೊಂದಿಗೆ ಆನಂದಿಸಿದವರು. ಆದರೆ ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರಿಂದ ದೇಶವು ನಿಯಮಗಳನ್ನು ಕಟ್ಟುನಿಟ್ಟು ಮಾಡಿದೆ ಅಂತೆಯೇ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ