ಇವುಗಳು ಜನರಿಗೆ ಮಾಂಸ ಸೇವನೆ ಮಾಡುವ ಆಸೆಯನ್ನು ಕಡಿಮೆ ಮಾಡುತ್ತವೆಯಂತೆ
ಭಾನುವಾರ, 5 ಆಗಸ್ಟ್ 2018 (06:38 IST)
ಲಂಡನ್ : ಜನರಿಗೆ ಮಾಂಸ ಸೇವನೆ ಮಾಡುವ ಆಸೆ ಮರಿಪ್ರಾಣಿಗಳ ಚಿತ್ರಗಳನ್ನು ವೀಕ್ಷಿಸುವುದರಿಂದ ಕಡಿಮೆಯಾಗುತ್ತದೆ ಎಂದು ಲಂಕಸ್ಟರ್ ವಿಶ್ವವಿದ್ಯಾಲಯ ಹಾಗೂ ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆ ಹಾಗೂ ಪುರುಷರಿಗೆ ಕಾಂಗರೂ ಮರಿ, ಕುರಿಮರಿ, ಮರಿಹಂದಿಗಳ ಚಿತ್ರಗಳನ್ನು ತೋರಿಸಿ ಅವು ಅವರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿವೆ ಎಂಬುದನ್ನು ಸಂಶೋಧಕರು ಅಧ್ಯಯನಕ್ಕೆ ಒಳಪಡಿಸಿದ್ದರು. ಆಗ 'ಚಿತ್ರಗಳನ್ನು ನೋಡಿದ ಜನರು, ಮರಿಗಳ ಚೆಂದ, ಸೂಕ್ಷ್ಮತೆ, ಕೋಮಲತೆ ಹಾಗೂ ಅವುಗಳೆಡೆಗಿನ ಪ್ರೀತಿಯನ್ನು ತೋರಿದರು. ಮಹಿಳೆ ಮತ್ತು ಪುರುಷರ ತೋರಿದ ಭಾವನೆಗಳಲ್ಲಿ ಭಿನ್ನತೆ ಇತ್ತು. ಮಾಂಸ ಬೇಕೆಂಬ ಅಪೇಕ್ಷೆಗೆ ವಿರುದ್ಧವಾದ ನಡವಳಿಕೆ ಅವರಲ್ಲಿ ಕಂಡುಬಂದಿತು' ಎಂದು ಸಂಶೋಧಕ ಜಾರೆಡ್ ಫಿಯಾಜ್ ಹೇಳಿದ್ದಾರೆ.
ಹಾಗೇ ಪುರುಷರಿಗಿಂತ ಮಹಿಳೆಯರ ಮೇಲೆ ಮರಿಗಳು ಹೆಚ್ಚು ಪರಿಣಾಮ ಬೀರಿದ್ದು, ಮುದ್ದುಮರಿಗಳ ಮೇಲೆ ಹೆಣ್ಣುಮಕ್ಕಳು ಹೆಚ್ಚು ಪ್ರೀತಿ ಭಾವ ಹೊಂದಿರುತ್ತಾರೆ ಎಂಬ ಅಂಶವನ್ನು ಈ ಅಧ್ಯಯನ ಕಂಡುಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ