ಶೋರೂಂಗೆ ಬರುವ ಮುನ್ನವೇ 300 ಆ್ಯಪಲ್ ಐಫೋನ್ X ಕಳವು
ಸ್ಯಾನ್ ಫ್ರಾನ್ಸಿಸ್ಕೊ: ಐಫೋನ್ X ಮಾರುಕಟ್ಟೆಗೆ ಬರುವ ಮುನ್ನವೇ ಕಳ್ಳತನವಾಗಿರುವ ಘಟನೆ ನಡೆದಿದೆ.
ಲಿಮಿಟೆಡ್ ಎಡಿಷನ್ ಇರುವ ಟ್ರಕ್ ನಲ್ಲಿ ಐಫೋನ್ X 64GB ಆವೃತ್ತಿಯ ಒಟ್ಟು 313 ಮೊಬೈಲ್ ಇದ್ದವು ಎನ್ನಲಾಗಿದೆ. ಈ ಪೈಕಿ 300 ಫೋನ್ ಗಳನ್ನು ಕಳವು ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಫೈಂಡ್ ಮೈ ಐಫೋನ್ ಎನ್ನುವ ಆಯ್ಕೆಯ ಮೂಲಕ ಕಳುವಾಗಿರುವ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ.